ಗೃಹಿಣಿಯರನ್ನುಗುರಿಪಡಿಸುವುದು ಹೇಡಿತನದ ಕೃತ್ಯ: ಈಡಿ ಸಮನ್ಸ್ ಕುರಿತು ಸಂಜಯ್ ರಾವುತ್

Prasthutha|

ಮುಂಬೈ: ಪಿ.ಎಂ.ಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ತನ್ನ ಪತ್ನಿಗೆ ಜಾರಿ ನಿರ್ದೇಶನಾಲಯ (ಈಡಿ) ಸಮನ್ಸ್ ಕಳುಹಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸದ ಸಂಜಯ್ ರಾವುತ್,ಗೃಹಿಣಿಯರನ್ನು ಗುರಿಪಡಿಸುವುದು ‘ಹೇಡಿತನದ ಕೃತ್ಯ’ ಎಂದಿದ್ದಾರೆ.

- Advertisement -

ನಾವು ಯಾರನ್ನೂ ಭಯಪಟ್ಟಿಲ್ಲ ಮತ್ತು ಅದರಂತೆ ಪ್ರತಿಕ್ರಿಯಿಸಲಿದ್ದೇವೆ ಎಂದು ರಾವುತ್ ವರದಿಗಾರರಿಗೆ ಹೇಳಿದ್ದಾರೆ.

“ಕಳೆದ ಒಂದು ವರ್ಷದಲ್ಲಿ ಶರದ್ ಪವಾರ್, ಏಕನಾಥ್ ಖಡ್ಸೆ ಮತ್ತು ಪ್ರತಾಪ್ ಸರ್ ನಾಯಕ್ ನೊಟೀಸನ್ನು ಪಡೆದಿದ್ದಾರೆ ಮತ್ತು ಈಗ ನೀವೆಲ್ಲರೂ ನನ್ನ ಹೆಸರನ್ನು ಚರ್ಚಿಸುತ್ತಿದ್ದೀರಿ. ಈ ಎಲ್ಲಾ ಜನರು ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ನಿರ್ಣಾಯಕವಾಗಿದ್ದರು” ಎಂದು ರಾವುತ್ ಹೇಳಿದರು.

- Advertisement -

“ ಗೃಹಣಿಯರನ್ನು ಗುರಿಪಡಿಸುವುದು ಹೇಡಿತನದ ಕೃತ್ಯವಾಗಿದೆ. ನಾವು ಯಾರನ್ನೇ ಭಯಪಟ್ಟಿಲ್ಲ. ಈಡಿಗೆ ಕೆಲವು ಕಾಗದ ಪತ್ರಗಳು ಬೇಕಾಗಿದ್ದವು ಮತ್ತು ಸಮಯಕ್ಕೆ ಸರಿಯಾಗಿ ಅದನ್ನು ಮಂಡಿಸಿದ್ದೇವೆ” ಎಂದು ಅವರು ತಿಳಿಸಿದರು.



Join Whatsapp