ಕೊರೋನ ಕಾಲದಲ್ಲಿ ಮೋದಿ ಮಾಡಿದ 6 ಭಾಷಣಗಳು ಯಾವುದು ಗೊತ್ತೇ?

Prasthutha|

ಇಂದು ಮೋದಿಯವರ 7ನೇ ಭಾಷಣ

- Advertisement -

ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ಧಾರೆ ಎಂದು ತನ್ನ ಅಧಿಕೃತ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಕೊರೋನ ಕಾಲದಲ್ಲಿ ಮೋದಿ 6 ಬಾರಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯಾವ ದಿನ, ಯಾವ ವಿಚಾರದಲ್ಲಿ ಮಾತನಾಡಿದ್ದರು ಎಂದು ತಿಳಿದುಕೊಳ್ಳುವುದು ಬಹಳ ಮಹತ್ವ ಪಡೆಯುತ್ತದೆ.

ಮಾರ್ಚ್ 19 – ಜನತಾ ಕರ್ಫ್ಯೂಗೆ ಮನವಿ

- Advertisement -

ಕೊರೋನ ವೈರಸ್ ಮಹಾಮಾರಿಯನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 19, 2020ರಂದು ಮೊದಲ ಬಾರಿಗೆ ದೇಶದ ಜನರೊಂದಿಗೆ ಮಾತನಾಡಿದರು. ರಾತ್ರಿ ಎಂಟು ಗಂಟೆಗೆ ಮಾತನಾಡಿದ ಮೋದಿ, ದೇಶದ ಜನತೆ ಕೊರೋನ ವೈರಸ್ ವಿರುದ್ಧ ಹೋರಾಡಲು ಒಂದಾಗಬೇಕೆಂದು ಕರೆ ನೀಡಿದರು. ಇದೇ ವೇಳೆ ಮಾರ್ಚ್ 22ರಂದು ಜನತಾ ಕರ್ಫ್ಯೂ ಕುರಿತು ಘೋಷಣೆ ಮಾಡಿದರು. ನಂತರ ಕೊರೋನ ವಾರಿಯರ್ಸ್ ಗಳ ಆತ್ಮಸ್ಥೈರ್ಯ ಹೆಚ್ಚಿಸಲು ಬಾಲ್ಕನಿ ಅಥವಾ ಮನೆಯ ಗೇಟಿನ ಮುಂಭಾಗ ನಿಂತು ಚಪ್ಪಾಳೆ, ತಟ್ಟೆ, ಜಾಗಟೆ ಬಾರಿಸಲು ಮನವಿ ಮಾಡಿದರು.

ಮಾರ್ಚ್ 24ರಂದು ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಣೆ

ಮಾರ್ಚ್ 22, 2020ರಂದು ಜನತಾ ಕರ್ಫ್ಯೂ ಘೋಷಿಸಿದ ಬಳಿಕ ಪ್ರಧಾನಿ ಮೋದಿ  ಮಾರ್ಚ್ 24ರಂದು ದೇಶದ ಜನರೊಂದಿಗೆ ಮತ್ತೊಮ್ಮೆ ಮಾತನಾಡಿದರು. ಕೊರೋನವನ್ನು ಎದುರಿಸುವ ನಿಟ್ಟಿನಲ್ಲಿ 21 ದಿನಗಳ ಲಾಕ್ ಡೌನ್ ಹೇರಿದರು.

3 ಎಪ್ರಿಲ್ – 9 ಗಂಟೆ 9 ನಿಮಿಷಕ್ಕೆ ದೀಪ ಬೆಳಗಿಸಲು ಮನವಿ

ಲಾಕ್ ಡೌನ್ 1ರ ನಂತರ ವಿಡಿಯೋ ಸಂದೇಶದ ಮೂಲಕ ಮತ್ತೊಮ್ಮೆ ಜನರ ಮುಂದೆ ಬಂದ ಪ್ರಧಾನಿ ಕೊರೋನ ವಾರಿಯರ್ಸ್ ಗಳನ್ನು ಬೆಂಬಲಿಸಲು ಮತ್ತು ಹಿಂದುಳಿದ ವರ್ಗಗಳ ಜನರೊಂದಿಗೆ ಐಕಮತ್ಯ ತೋರುವ ಸಂದೇಶ ನೀಡಿದರು. ಎಪ್ರಿಲ್ 5ರಂದು ರಾತ್ರಿ 9 ಗಂಟೆ 9 ನಿಮಿಷಕ್ಕೆ ಜನರು ಬಾಲ್ಕನಿ ಅಥವಾ ಮನೆಯ ಹೊರಗೆ ಬಂದು ದೀಪ, ಮೊಂಬತ್ತಿ ಅಥವಾ ಮೊಬೈಲ್ ಫ್ಲ್ಯಾಶ್ ಮೂಲಕ ದೀಪ ಬೆಳಗಬೇಕೆಂದು ಕರೆ ನೀಡಿದ್ದರು.

14 ಎಪ್ರಿಲ್ – ಲಾಕ್ ಡನ್ 2ರ ಘೋಷಣೆ

ಲಾಕ್ ಡೌನ್ 1 ಪೂರ್ಣಗೊಳ್ಳುವ ಮೊದಲೇ ಪ್ರಧಾನಿ ಮೋದಿ ಮತ್ತೊಮ್ಮೆ ದೇಶದ ಮುಂದೆ ಬಂದರು. ಎಪ್ರಿಲ್ 14ರಂದು ನೀಡಿದ ತನ್ನ ಸಂದೇಶದಲ್ಲಿ ಮೇ 3ರಿಂದ ದೇಶಾದ್ಯಂತ  ಲಾಕ್ ಡೌನ್ 2ನ್ನು ಘೋಷಿಸಿದರು.

7 ಮೇ ಬುದ್ಧ ಪೂರ್ಣಿಮೆಯ ದಿನ ಸಂದೇಶ

ಮೆ 7ರಂದು ನೀಡಿದ ಸಂದೇಶ ಕೊರೋನ ವೈರಸ್ ಕುರಿತಾಗಿರಲಿಲ್ಲ. ಕೊರೋನ ಸೋಂಕಿನ ಕುರಿತು ಪ್ರಸ್ತಾಪ ಮಾಡಿದ್ದರು.

12 ಮೇ – ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಮೇ 12ರ ರಾತ್ರಿ ಮತ್ತೊಮ್ಮೆ ರಾಷ್ಟ್ರವನ್ನು ಕುರಿತು ಮಾತನಾಡಿದರು. ಇದು ಕೋರೋನ ಕಾಲದಲ್ಲಿ ದೇಶದ ಜನತೆ ನೀಡಿದ 6ನೇ ಸಂದೇಶವಾಗಿತ್ತು. ಆ ವೇಳೆ ಪ್ರಧಾನಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಘೋಷಣೆ ಮಾಡಿದ್ದರು.

ಕೇಂದ್ರದ ಮೋದಿ ಸರಕಾರವು ಭಾಷಣಗಳ ಮೂಲಕ ಜನರನ್ನು ರಂಜಿಸಿತೇ ವಿನಃ ಕೊರೋನ ಬಿಕ್ಕಟ್ಟನ್ನು ಎದುರಿಸುವಲ್ಲಿ ಶೋಚನೀಯ ವೈಫಲ್ಯ ಕಂಡಿದೆ. ಯಾವುದೇ ಯೋಜನೆ ಹಾಗೂ ಪೂರ್ವ ಸಿದ್ಧತೆ ಇಲ್ಲದ ಲಾಕ್ ಡೌನ್ ನಿಂದಾಗಿ ದೇಶದ ಜನತೆ ಅತಂತ್ರರಾಗಿದ್ದರು ಮತ್ತು ವಲಸೆ ಕಾರ್ಮಿಕರ ಮಹಾ ಪಲಾಯನ ನಡೆದು ಬಹಳಷ್ಟು ಕಾರ್ಮಿಕರು ಸಾವು-ನೋವಿಗೆ ಒಳಗಾಗಿದ್ದರು. ಅದೇ ರೀತಿ ಕೊರೋನ ವಾರಿಯರ್ಸ್ ಗಳಿಗೆ ಯಾವುದೇ ವೈದ್ಯಕೀಯ ಸೌಲಭ್ಯ ಕಲ್ಪಿಸದೇ ಚಪ್ಪಾಳೆ, ತಟ್ಟೆ, ಜಾಗಟೆ ಬಾರಿಸಲು ಮತ್ತು  ದೀಪ ಬೆಳಗಲು ಕರೆ ನೀಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇಂತಹ ಅಸಂಬದ್ಧ ಕ್ರಮಗಳಿಗೆ ಬದಲಿಗೆ ಮೂಲಭೂತ ಹಾಗೂ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸಬೇಕೆಂದು ಸ್ವತಃ ವೈದ್ಯ ಸಮುದಾಯವೇ ಹೇಳಿತ್ತು. ಮಾತ್ರವಲ್ಲಇಂತಹ ಅವೈಜ್ಞಾನಿಕ ಕ್ರಮಗಳ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿತ್ತು.

ಅದೇ ರೀತಿ ಪ್ರಧಾನಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಜನಸಾಮಾನ್ಯರಿಗೆ ಯಾವುದೇ ಲಾಭ ತಂದು ಕೊಡುವಂಥದ್ದಲ್ಲ ಎಂಬ ಚರ್ಚೆಗಳು ವಿಶ್ಲೇಷಕರಿಂದ ನಡೆಯಿತು.



Join Whatsapp