ಕೋವಿಡ್ ನಿಯಮಾವಳಿ ಪಾಲಿಸದ ಜವಳಿ ಅಂಗಡಿ: ಕಾರ್ಪೊರೇಷನ್ ಅಧಿಕಾರಿಗಳಿಂದ ಶೋ ರೂಂ‌ಗೆ ಮೊಹರು

Prasthutha|

ಚೆನ್ನೈ,ಅ.20: ಟಿ.ನಗರದ ಕುಮಾರನ್ ಸಿಲ್ಕ್ಸ್ ಶೋ ರೂಂಗೆ ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಮೊಹರು ಹಾಕಿದರು. ಜವಳಿ ಶೋ ರೂಂನಲ್ಲಿ ಜನದಟ್ಟಣೆ ಮತ್ತು COVID-19 ನಿಯಮಗಳನ್ನು ನಿರ್ವಹಿಸುವಲ್ಲಿ ವಿಫಲವಾದ ಕಾರಣಕ್ಕಾಗಿ ಹಾಗೂ ಸಾಮಾಜಿಕ ಅಂತರ, ಮಾಸ್ಕ್ ಮಾನದಂಡಗಳನ್ನು ಪಾಲಿಸದ ಕಾರಣಕ್ಕಾಗಿ ಕ್ರಮ ಕೈಗೊಳಲಾಗಿ್ದೆದೆ ಎಂಬುದಾಗಿ ವರದಿಯಾಗಿದೆ.

ಕುಮಾರನ್ ಸಿಲ್ಕ್ಸ್ ಶೋ ರೂಂಗೆ ಭಾನುವಾರ ಹೆಚ್ಚಿನ ಸಂಖ್ಯೆಯ ಜನಸಂದಣಿ ಸೇರುತ್ತಿರುವ ಬಗ್ಗೆ ದೂರುಗಳು ಲಭಿಸಿದ್ದು, ಶೋ ರೂಂ ಅಧಿಕಾರಿಗಳು ಜನಸಂದಣಿಯನ್ನು ನಿಯಂತ್ರಿಸಲು, ಯಾವುದೇ ಕ್ರಮಗಳನ್ನು ಜಾರಿಗೆ ತರಲು ವಿಫಲರಾಗಿದ್ದಾರೆ ಎಂದು ನಿಗಮದ ಕೊಡಂಬಕ್ಕಂ ವಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

COVID-19 ಸಾಂಕ್ರಾಮಿಕ ರೋಗದಿಂದಾಗಿ ನಗರದಲ್ಲಿ ಈಗಲೂ ಲಾಕ್‌ಡೌನ್ ನಿಯಮಾವಳಿ ಜಾರಿಯಲ್ಲಿದೆ. ಶೋ ರೂಂನಲ್ಲಿ ಜನಸಂದಣಿಯು ತನ್ನ ಸಂದರ್ಶಕರಲ್ಲಿ ವೈರಸ್ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಾಗಿ ವರದಿಯಾಗಿದೆ.

Join Whatsapp