ಒಲಿಂಪಿಕ್ಸ್`ನಲ್ಲಿ ಅತೀಹೆಚ್ಚು ಪದಕ ಗೆದ್ದು ದಾಖಲೆ ನಿರ್ಮಿಸಿದ ಭಾರತ..!

Prasthutha|

ಟೋಕಿಯೋ: ಒಲಿಂಪಿಕ್ಸ್ ಇತಿಹಾಸದಲ್ಲೇ ಅತೀಹೆಚ್ಚು ಪದಕ ಗೆದ್ದು ಭಾರತ ಹೊಸ ದಾಖಲೆ ನಿರ್ಮಿಸಿದೆ. ಓದಲು ಅಚ್ಚರಿ ಎನಿಸಿದರು ಇದು ಸತ್ಯ. ಭಾರತ ಅತೀ ಹೆಚ್ಚುಪದಕ ಗೆದ್ದು ದಾಖಲೆ ನಿರ್ಮಿಸಿರುವುದು ಹಾಕಿಯಲ್ಲಿ.
ಹೌದು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್’ನಲ್ಲಿ ಸೆಮಿಪೈನಲ್ನಲ್ಲಿ ಅಜೆಂಟೀನಾ ವಿರುದ್ಧ ಹೋರಾಡಿ ಸೋತ ಬಳಿಕ ಕಂಚಿನ ಪದಕಕ್ಕಾಗಿ ಜರ್ಮನಿ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯರು ವೀರೋಚಿತ ಗೆಲುವು ಸಾಧಿಸಿದ್ದರು. ಆ ಮೂಲಕ ಭಾರತದ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ 3ನೇ ಬಾರಿ ಕಂಚು ಜಯಿಸಿದಂತಾಗಿದೆ.

- Advertisement -


ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇದುವರೆಗೆ ಒಟ್ಟು 8 ಬಾರಿ ಚಿನ್ನದ ಪದಕ, 1 ಬಾರಿ ಬೆಳ್ಳಿಯ ಪದಕ ಹಾಗೂ ಟೋಕಿಯೋ ಒಲಿಂಪಿಕ್ಸ್ ಸೇರಿ 3 ಕಂಚಿನ ಪದಕ ಜಯಿಸಿದೆ. ಹೀಗಾಗಿ ಹಾಕಿಯಲ್ಲಿ ಒಟ್ಟು ಪದಕಗಳ ಸಂಖ್ಯೆ 12ಕ್ಕೇರಿದ್ದು, ಅತೀ ಹೆಚ್ಚು ಪದಕ ಗೆದ್ದ ದಾಖಲೆಯನ್ನ ತಮ್ಮದಾಗಿಸಿಕೊಂಡಿದ್ದಾರೆ.
ಆ ಮೂಲಕ ಜರ್ಮನಿಯ ಹೆಸರಿನಲ್ಲಿದ್ದ ಅತೀ ಹೆಚ್ಚು ಪದಕ ಗೆದ್ದ ದಾಖಲೆ (11 ಪದಕ)ಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜರ್ಮನಿ ಒಲಿಂಪಿಕ್ಸ್ ನಲ್ಲಿ ಇದುವರೆಗೂ 4 ಬಾರಿ ಚಿನ್ನದ ಪದಕ, 3 ಬಾರಿ ಬೆಲ್ಳಿ ಹಾಗೂ 4 ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ.

Join Whatsapp