ಏಲೂರು | ಅಜ್ಞಾತ ಕಾಯಿಲೆಗೆ ಕಾರಣ ಪತ್ತೆ

Prasthutha|

ಆಂಧ್ರಪ್ರದೇಶ: ಈ ಹಿಂದೆ ಗೋದಾವರಿ ಜಿಲ್ಲೆಯ ಏಲೂರು ನಗರದಲ್ಲಿ ಅಜ್ಞಾತ ಕಾಯಿಲೆಗೆ ತುತ್ತಾಗಿ ಓರ್ವ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಇದೀಗ ಈ ನಿಗೂಢ ಕಾಯಿಲೆಗೆ ಕಾರಣ ಪತ್ತೆ ಹಚ್ಚಲಾಗಿದೆ.

- Advertisement -

ಕುಡಿಯುವ ನೀರು ಮತ್ತು ಹಾಲಿನಲ್ಲಿರುವ ಸೀಸ ಹಾಗೂ ನಿಕಲ್ ಅಂಶವೇ ನಿಗೂಢ ಕಾಯಿಲೆಗೆ ಕಾರಣ ಎಂದು ಏಮ್ಸ್ ರಾಜ್ಯ ಹಾಗೂ ಕೇಂದ್ರದ ಇತರೆ ಸಂಸ್ಥೆಗಳ ತಜ್ಞರ ತಂಡವು ನಡೆಸಿದ ಪ್ರಾಥಮಿಕ ಪರಿಶೀಲನೆಯ ವೇಳೆ ಕಂಡುಹಿಡಿಯಲಾಗಿದೆ.

“ಪ್ರಾಥಮಿಕ ಮಾಹಿತಿಯಂತೆ ಸೀಸ ಹಾಗೂ ನಿಕಲ್ ಅಂಶವೇ ಜನರು ಅಸ್ವಸ್ಥರಾಗಲು ಕಾರಣ ಎಂದು ತಿಳಿದುಬಂದಿದೆ. ಅಸ್ವಸ್ಥರಾದ ಜನರು ಚೇತರಿಸಿಕೊಳ್ಳುತ್ತಿದ್ದು, ಜನರು ಹೆದರಬೇಕಾಗಿಲ್ಲ” ಎಂದು ಉಪಮುಖ್ಯಮಂತ್ರಿ ಎ.ಕೆ.ಕೆ.ಶ್ರೀನಿವಾಸ್ ಹೇಳಿದ್ದಾರೆ.

Join Whatsapp