ಆಕ್ಸಿಜನ್ ಕೇಳಿದ ವ್ಯಕ್ತಿಗೆ ಕಪಾಳಮೋಕ್ಷದ ಬೆದರಿಕೆ ಹಾಕಿದ ಕೇಂದ್ರ ಸಚಿವ!

Prasthutha|

ಹೊಸದಿಲ್ಲಿ : ಕೋವಿಡ್ ನಿಂದ ಬಳಲುತ್ತಿದ್ದ ತಾಯಿಗೆ ಆಕ್ಸಿಜನ್ ಒದಗಿಸುವಂತೆ ಬೇಡಿಕೊಂಡ ವ್ಯಕ್ತಿಯೊಬ್ಬರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಕಪಾಳಮೋಕ್ಷ ಮಾಡುತ್ತೇನೆಂದು ಧಮ್ಕಿ ಹಾಕಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ದಾಮೋಹ್ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ಲೂಟಿ ಮಾಡಲಾಗಿದ್ದು, ಅಲ್ಲಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರೊಂದಿಗೆ ವ್ಯಕ್ತಿಯೊಬ್ಬರು “ನನ್ನ ತಾಯಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಆಕ್ಸಿಜನ್ ಸಿಲಿಂಡರ್ ಅಗತ್ಯವಿದೆ. 36 ಗಂಟೆಗಳ ಬಳಿಕ ಆಕ್ಸಿಜನ್ ನೀಡುವುದಾಗಿ ಆಸ್ಪತ್ರೆಯವರು ಹೇಳಿದ್ದರು. ಆದರೆ, ಇನ್ನೂ ಕೊಟ್ಟಿಲ್ಲ” ಎಂದು ಹೇಳಿದರು. ಮಾತನಾಡುವ ವೇಳೆ ವ್ಯಕ್ತಿ ಸಚಿವರ ಹತ್ತಿರ ಬಂದು ಮಾತನಾಡಿದ್ದರು.

ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಸಚಿವರು ಇದೇ ದಾಟಿಯಲ್ಲಿ ಮಾತನಾಡಿದರೆ, ಕಪಾಳಮೋಕ್ಷ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ.

- Advertisement -

ನಂತರ ಅಳಲಾರಂಭಿಸಿದ ವ್ಯಕ್ತಿ, ಹೌದು, ನನಗೆ ಅದುವೇ ಸಿಗುತ್ತದೆ ಎಂಬುದು ಗೊತ್ತಿದೆ. ನನ್ನ ತಾಯಿ ಅಲ್ಲಿಯೇ ಮಲಗಿದ್ದಾಳೆ. ಈಗ ನಾವೇನೂ ಮಾಡಬೇಕು ಎಂದು ಕೇಳಿದ್ದಾನೆ. ಬಳಿಕ ವಿಡಿಯೋ ರೆಕಾರ್ಡ್ ಆಗುತ್ತಿರುವುದನ್ನು ಗಮನಿಸಿದ ಸಚಿವರು ಕೂಡಲೇ ಎಚ್ಚೆತ್ತುಕೊಂಡು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.

ನಿಮಗೆ ಯಾರಾದರೂ ಆಮ್ಲಜನಕ ಸಿಲಿಂಡರ್ ನಿರಾಕರಿಸಿದ್ದಾರೆಯೇ? ಎಂದು ಕೇಳಿದ್ದಾರೆ. ಆಗ ಆ ವ್ಯಕ್ತಿ, “ಹೌದು, ಅವರು ನಿರಾಕರಿಸಿದರು, ನಮಗೆ ಐದು ನಿಮಿಷ ಮಾತ್ರ ಆಕ್ಸಿಜನ್ ಸಿಕ್ಕಿತು” ಎಂದು ಉತ್ತರಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

Join Whatsapp