ಅಮೆರಿಕದಲ್ಲಿ ಸಿಖ್ಖರನ್ನು ಅಪಹರಿಸಿ ಕೊಂದಾತ 17 ವರ್ಷದ ಹಿಂದೆ ಮತ್ತೊಂದು ಕುಟುಂಬವನ್ನು ಇದೇ ರೀತಿ ಅಪಹರಿಸಿದ್ದ!!

Prasthutha|

ಕ್ಯಾಲಿಫೋರ್ನಿಯಾ: ಇತ್ತೀಚೆಗೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಕುಟುಂಬವೊಂದನ್ನು ಅಪಹರಿಸಿ ಕೊಲೆಗೈದವ ಸೆರೆ ಸಿಕ್ಕಿದ್ದು, ಆರೋಪಿಯನ್ನು ಜೀಸಸ್ ಸಲ್ಗಾಡೋ ಎಂದು ಗುರುತಿಸಲಾಗಿದೆ.

- Advertisement -

ಸಾಮೂಹಿಕ ಕೊಲೆಗೈದ ಈತನ ಇನ್ನೊಂದು ಇದೇ ಬಗೆಯ ಕರಾಳ ಇತಿಹಾಸ ಬಯಲಾಗಿದೆ. ಈತ ಸುಮಾರು 17 ವರ್ಷದ ಹಿಂದೆ ಕುಟುಂಬವೊಂದನ್ನು ಇದೇ ಬಗೆಯಲ್ಲಿ ಅಪಹರಿಸಿದ್ದ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿ ಈತನನ್ನು ಆ ಸಮಯದಲ್ಲಿ ಬಂಧಿಸಲಾಗಿತ್ತು. ಆ ಬಳಿಕ ಬಿಡುಗಡೆಗೊಂಡಿದ್ದ ಎನ್ನಲಾಗಿದೆ. ಇದಾದ ನಂತರ ಇನ್ನೊಂದು ಘಟನೆಯನ್ನು ಅಪಹರಿಸುವ ಮೂಲಕ ಮತ್ತೆ ಜೈಲು ಸೇರಿದ್ದಾನೆ.

Join Whatsapp