ಲೈಫ್ ಬಾಯ್ ಮತ್ತು ಲಕ್ಸ್ ಸಾಬೂನುಗಳ ಬೆಲೆ ಇಳಿಕೆ

Prasthutha|

ದೆಹಲಿ: ಹಿಂ‌ದುಸ್ತಾನ್‌ ಯುನಿಲಿವರ್‌ ಲಿಮಿಟೆಡ್‌ (ಎಚ್‌ಯುಎಲ್‌) ಕಂಪನಿಯು, ತನ್ನ ಉತ್ಪಾದಕವಾದ ಲೈಫ್‌ಬಾಯ್‌ ಮತ್ತು ಲಕ್ಸ್‌ ಬ್ರ್ಯಾಂಡ್‌ನ ಸಾಬೂನುಗಳ ಬೆಲೆಯನ್ನು ಇಳಿಕೆ ಮಾಡಿದೆ.

- Advertisement -

ಶೇ 5 ರಿಂದ ಶೇ 11ರವರೆಗೆ ಇಳಿಕೆ ಮಾಡಿದ್ದು, ವಿಶೇಷವಾಗಿ ಪಶ್ಚಿಮದ ಪ್ರದೇಶಗಳಲ್ಲಿ ಈ ಇಳಿಕೆಯನ್ನು ಕಾರ್ಯಗತಗೊಳಿಸಿದೆ.

ತಾಳೆ ಎಣ್ಣೆ ಮತ್ತು ಇತರೆ ಕಚ್ಚಾ ಸಾಮಗ್ರಿಗಳ ಬೆಲೆಯು ಇಳಿಕೆ ಆಗಿರುವುದರಿಂದ ಮತ್ತು ಹಣದುಬ್ಬರದ ಪರಿಣಾಮ ಮಾರುಕಟ್ಟೆ ರಂಗದಲ್ಲಿ ಬೇಡಿಕೆಯ ಪ್ರಮಾಣದ ಕುಸಿತತ ಕಾರಣದಿಂದ ಈ ಇಳಿಕೆಯನ್ನು ಮಾಡಲಾಗಿದೆ ಎನ್ನಲಾಗಿದೆ.

- Advertisement -

ಇದರ ಜೊತೆಗೇ ಗೋದ್ರೆಜ್‌ ಕಂಪನಿಯ ನಂ. 1 ಸಾಬೂನಿನ ಬೆಲೆಯೂ ಕೂಡ ಶೇ 13ರಿಂದ ಶೇ 15ರವರೆಗೆ ಇಳಿಕೆ ಆಗಿದೆ.

Join Whatsapp