ಅಭ್ಯಾಸದ ವೇಳೆ ಗುಂಡು ತಗುಲಿ ಯೋಧ ಸಾವು

Prasthutha|

- Advertisement -

ಜೈಸಲ್ಮೇರ್ : ಸೈನಿಕರು ಶೂಟಿಂಗ್​ ಅಭ್ಯಾಸ ನಡೆಸುತ್ತಿದ್ದ ವೇಳೆ ಗುಂಡೇಟು ತಗುಲಿ ಯೋಧನೋರ್ವ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಪೋಖ್ರಾನ್​ನಲ್ಲಿ ನಡೆದಿದೆ.

ಉತ್ತರಪ್ರದೇಶದ ಆಗ್ರಾ ಮೂಲದ 32 ವರ್ಷದ ಸತೀಶ್ ​ಸಾವನ್ನಪ್ಪಿದ ಬಿಎಸ್‌ಎಫ್ ಯೋಧ. ಗುಜರಾತ್‌ನ ಭುಜ್‌ನಿಂದ ಬಿಎಸ್‌ಎಫ್‌ನ 1077ನೇ ಬೆಟಾಲಿಯನ್ ಪೋಖ್ರಾನ್​ ಫೀಲ್ಡ್ ಫೈರಿಂಗ್ ಶ್ರೇಣಿಯಲ್ಲಿ ಶೂಟಿಂಗ್​ ಅಭ್ಯಾಸ ನಡೆಸಲಾಗುತ್ತಿದ್ದು,

- Advertisement -

ಈ ವೇಳೆ ಅಚಾನಕ್​ ಆಗಿ ಗುಂಡು ಸತೀಶ್​ಗೆ ತಗುಲಿದೆ. ಘಟನೆಯಲ್ಲಿ ಸತೀಶ್​ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Join Whatsapp