ಜೈಸಲ್ಮೇರ್ : ಸೈನಿಕರು ಶೂಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಗುಂಡೇಟು ತಗುಲಿ ಯೋಧನೋರ್ವ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಪೋಖ್ರಾನ್ನಲ್ಲಿ ನಡೆದಿದೆ.
ಉತ್ತರಪ್ರದೇಶದ ಆಗ್ರಾ ಮೂಲದ 32 ವರ್ಷದ ಸತೀಶ್ ಸಾವನ್ನಪ್ಪಿದ ಬಿಎಸ್ಎಫ್ ಯೋಧ. ಗುಜರಾತ್ನ ಭುಜ್ನಿಂದ ಬಿಎಸ್ಎಫ್ನ 1077ನೇ ಬೆಟಾಲಿಯನ್ ಪೋಖ್ರಾನ್ ಫೀಲ್ಡ್ ಫೈರಿಂಗ್ ಶ್ರೇಣಿಯಲ್ಲಿ ಶೂಟಿಂಗ್ ಅಭ್ಯಾಸ ನಡೆಸಲಾಗುತ್ತಿದ್ದು,
ಈ ವೇಳೆ ಅಚಾನಕ್ ಆಗಿ ಗುಂಡು ಸತೀಶ್ಗೆ ತಗುಲಿದೆ. ಘಟನೆಯಲ್ಲಿ ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.