ಅನಧಿಕೃತ ಮಾಂಸ ಮಾರಾಟ ಮಾಡಿದರೆ ಅಂಗಡಿ ಪರವಾನಿಗೆ ರದ್ದು : ಮೇಯರ್ ದಿವಾಕರ ಪಾಂಡೇಶ್ವರ್ ಎಚ್ಚರಿಕೆ

Prasthutha|

ಮಂಗಳೂರು : ಅನಧಿಕೃತ ಮಾಂಸ ಮಾರಾಟ ಮಾಡಿದರೆ, ನಗರದ ಮಾಂಸ ಮಾರಾಟ ಅಂಗಡಿ ಮಾಲಕರ ಪರವಾನಿಗೆ ರದ್ದು ಪಡಿಸುವುದಾಗಿ, ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ್ ಎಚ್ಚರಿಕೆ ನೀಡಿದ್ದಾರೆ. ನಗರದ ಮಾಂಸದ ಅಂಗಡಿಗಳಲ್ಲಿ ಇತರ ಜಿಲ್ಲೆಗಳು ಮತ್ತು ರಾಜ್ಯಗಳಿಂದ ತಂಡ ಮಾಂಸದ ಮಾರಾಟ ಮಾಡಲಾಗುತ್ತಿದೆ ಎಂಬ ಹಲವಾರು ದೂರುಗಳು ಬರುತ್ತಿವೆ. ನಗರದಲ್ಲಿರುವ 20 ಮಾಂಸ ಮಾರಾಟದ ಅಂಗಡಿ ಮಾಲಕರು ಬೇರೆ ರಾಜ್ಯಗಳಿಂದ, ಜಿಲ್ಲೆಗಳಿಂದ ಮಾಂಸ ತರಬಾರದು ಎಂದು ಅವರು ತಾಕೀತು ಮಾಡಿದ್ದಾರೆ.

- Advertisement -

ನಗರದ ಅಧಿಕೃತ ಕಸಾಯಿಖಾನೆಯಿಂದಲೇ ನಗರದ ಎಲ್ಲಾ ಮಾಂಸದ ಅಂಗಡಿ ಮಾಲಕರು ಮಾಂಸ ಪಡೆಯಬೇಕು. ಅದೇ ಮಾಂಸವನ್ನು ಮಹಾನಗರ ವ್ಯಾಪ್ತಿಯಲ್ಲಿ ಮಾರಾಟ ಮಾಡಬೇಕು. ಕಸಾಯಿ ಖಾನೆಯಿಂದ ಮಾಂಸ ಖರೀದಿಸುವಾಗ ಮಾಂಸದ ಅಂಗಡಿ ಮಾಲಕರು ಬಿಲ್ ರಶೀದಿಗಳನ್ನು ತೆಗೆದುಕೊಂಡು, ಇಟ್ಟುಕೊಂಡಿರಬೇಕು ಎಂದು ಅವರು ಸೂಚಿಸಿದ್ದಾರೆ.

ಕಸಾಯಿಖಾನೆಗೆ ಪ್ರಾಣಿಗಳನ್ನು ಸಾರಿಗೆ ಇಲಾಖೆಯಲ್ಲಿ ನೋಂದಾಯಿಸಿದ ವಿಶೇಷ ವಾಹನದಲ್ಲೇ ಕೊಂಡು ಹೋಗಬೇಕು. ಕಸಾಯಿ ಖಾನೆ ಮಾಲಕರು ಈ ನಿಯಮವನ್ನು ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.

- Advertisement -

ನ.17ರಿಂದ ಕಾಲೇಜು ಆರಂಭಿಸುವುದಾಗಿ ಸರಕಾರ ಘೋಷಿಸಿದೆ. ಈ ಬಗ್ಗೆ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಕೋವಿಡ್ – 19 ಪ್ರಕರಣಗಳು ಇನ್ನೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿರುವಾಗ ಕಾಲೇಜು ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡಿರುವುದು ಸರಿಯೇ? ತಪ್ಪೇ? ಎಂಬ ಬಗ್ಗೆ ‘ಪ್ರಸ್ತುತ’ ಜನಾಭಿಮತ ಸಂಗ್ರಹಿಸುತ್ತಿದೆ. ಈ ಬಗ್ಗೆ ನಿಮ್ಮ ನಿಲುವನ್ನು ‘ಪ್ರಸ್ತುತ’ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಪಡಿಸಿ.

https://www.facebook.com/2171161852895947/posts/3694124020599715/

Join Whatsapp