ಸಾತಾನ್ ಕುಳದ ಸೈತಾನರು

Prasthutha|

– ಕಲೀಂ

1861ರಲ್ಲಿ ಬ್ರಿಟಿಷರು ಭಾರತೀಯರನ್ನು ತಮ್ಮ ನಿಯಂತ್ರಣದಲ್ಲಿಡಲು ಹಾಗೂ ಹತ್ತಿಕ್ಕುವ ಸಲುವಾಗಿ ಪೊಲೀಸ್ ಕಾಯ್ದೆಯನ್ನು ಜಾರಿಗೆ ತಂದರು. ಕಾಯ್ದೆಯ ಇತಿಹಾಸದಲ್ಲೇ ಇದೀಗ ಮೊದಲ ಬಾರಿಗೆ ಪೊಲೀಸರನ್ನೆಲ್ಲ ಹೊರ ಹಾಕಿದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಇಡೀ ಪೊಲೀಸ್ ಸ್ಟೇಷನ್‌ ನನ್ನು ತನ್ನ ವಶಕ್ಕೆ ತೆಗದುಕೊಂಡಿದೆ. ತೂತುಕುಡಿಯ ಸಾತಾನ್‌ ಕುಳಂ ಪೊಲೀಸ್ ಸ್ಟೇಷನ್ ನಿಯಂತ್ರಣದಲ್ಲಿರುವ ಕೋವಿಲ್ಪಟ್ಟಿ ಸಬ್‌ಜೈಲ್ ಪೊಲೀಸರು, ಸಣ್ಣ ವ್ಯಾಪಾರಿಗಳಾದ ಜಯರಾಜ್ ಮತ್ತು ಅವರ ಮಗ ಬೆನಿಕ್ಸ್ ನನ್ನು ಕ್ರೂರವಾಗಿ ಹಿಂಸಿಸಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ.

- Advertisement -

 ಜೂನ್ 27ರ ಶನಿವಾರದಂದು, ಸಣ್ಣದಾದ ಒಂದು ಆರೋಪಕ್ಕಾಗಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೆಚ್ಚಿನ ದೇಶಗಳಲ್ಲಿ ಅದೆಂದೋ ಕೈ ಬಿಟ್ಟ ಹಿಂಸೆಯನ್ನು ಪೊಲೀಸರು ಇವರಿಬ್ಬರ ಮೇಲೆ ಪ್ರಯೋಗ ಮಾಡಿದ್ದಾರೆಂದು ಈ ನತದೃಷ್ಟ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಡಾಕ್ಟರ್ ಹೇಳಿದ್ದಾರೆ.

 ಗುದದ್ವಾರದಲ್ಲಿ ನಿರಂತರವಾಗಿ ರಕ್ತ ಸೋರುವುದರಿಂದ ಅಪ್ಪ ಮತ್ತು ಮಗನಿಗೆ ಧರಿಸಿದ್ದ ಬಟ್ಟೆಯನ್ನು 7 ಸಲ ಬದಲಾಯಿಸಬೇಕಾಗಿ ಬಂದಿತ್ತು. ಯಾವನೇ ಕ್ರೂರಿಯು ಕೂಡ ತನ್ನ ಕನಸಲ್ಲೂ ನೆನಸದಂತಹ ಅತೀವ ಕ್ರೌರ್ಯವನ್ನು ಪೊಲೀಸರು ತೋರಿದ್ದಾರೆ.

 ಪೊಲೀಸರು ಇಬ್ಬರನ್ನೂ ಬೆತ್ತಲೆಗೊಳಿಸಿದ ನಂತರ ನಡೆಸಿದ ದೈಹಿಕ ಹಿಂಸೆಯಿಂದ ಅವರ ಶರೀರದಲ್ಲಿನ ಚರ್ಮಗಳು ಕಿತ್ತು ಬಂದಿರುವ ಸ್ಥಿತಿಯಲ್ಲಿ ನೋಡಿರುವುದಾಗಿ ವಕೀಲರು ಹೇಳಿದ್ದಾರೆ. ಲಾಕ್‌ ಡೌನ್ ಸಮಯ ಕಳೆದು 15 ನಿಮಿಷ ತಡವಾಗಿ ಅಂಗಡಿಯನ್ನು ಮುಚ್ಚಿದ ತಪ್ಪಿಗಾಗಿ ಅವರಿಗೆ ದೊರೆತ ಶಿಕ್ಷೆ ಮರಣವಾಗಿತ್ತು.

 ಹೈಕೋರ್ಟ್‌ನ ಮಧುರೈ ವಿಭಾಗೀಯ ಪೀಠವು ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೊಳಪಡಿಸಲು ಫಾರೆನ್ಸಿಕ್ ಇಲಾಖೆಯ ಸಹಾಯದೊಂದಿಗೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲು ತೂತುಕುಡಿ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ. ಪ್ರಕರಣವನ್ನು ವಹಿಸಿಕೊಂಡ ಸಿಬಿಐ, 6 ಪೊಲೀಸರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದೆ.

  ಸಾತಾನ್‌ಕುಳದ ಲಾಕಪ್ ಕೊಠಡಿಗಳಿಗೆ ಇಂತಹ ಅನೇಕ ಭಯಾನಕ ಕತೆಗಳನ್ನು ಹೇಳಲಿಕ್ಕಿದೆ. ತಮಿಳುನಾಡು ಇದೀಗ ಬಿಜೆಪಿ ಆಡಳಿತವಿರುವ ರಾಜ್ಯವಾಗಿದೆ. ಪ್ರಜಾಪ್ರಭುತ್ವದ ಸಣ್ಣ ನರಳಾಟಕ್ಕೂ ಅನುಮತಿ ನೀಡದ ಲಾಕ್‌ ಡೌನ್ ಕಾಲಾವಧಿಯಲ್ಲಿ ಬೆನಿಕ್ಸ್‌ನ ಬೆನ್ನಿನಿಂದ ತೊಗಲು ಮತ್ತು ಮಾಂಸ ಹರಿದುಹೋಗುವ ವರೆಗೆ ಪೊಲೀಸರು ದೌರ್ಜನ್ಯ ಎಸಗಿದ್ದರು. ಕೊಲ್ಲಲ್ಪಟ್ಟ ಮೃತದೇಹ ಗಾಯಗಳಿಂದ ತುಂಬಿತ್ತು. ಮಾತ್ರವಲ್ಲ, ಲೈಂಗಿಕವಾಗಿಯೂ ಅವರನ್ನು ಹಿಂಸಿಸಲಾಗಿತ್ತು. ಬಂಧಿತ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸದೆ ಸಬ್‌ಜೈಲಿಗೆ ಕಳಿಸಿದ ಮೇಜಿಸ್ಟ್ರೇಟ್ ಬಿ.ಶರವಣನ್ ಆಳುವ ಮಂದಿಯ ಮುಖ ನೋಡಿ ತೀರ್ಪು ನೀಡುವವರಾಗಿದ್ದರು.

 ಮುಖ್ಯಮಂತ್ರಿ ಎಡಪ್ಪಾಡಿ.ಕೆ. ಪಳನಿಸಾಮಿ ಕೇವಲ ಸಿಬಿಐಗೆ ಪ್ರಕರಣವನ್ನು ವಹಿಸಿಕೊಟ್ಟುಬಿಟ್ಟರೆ, ಈ ಪ್ರಕರಣದಲ್ಲಿ ನ್ಯಾಯ ಲಭಿಸುವುದೆಂದು ಹೇಳಲಾಗದು. ಮೆಜಿಸ್ಟ್ರೇಟ್ ಬಿ.ಶರವಣನ್, ಜಿಲ್ಲಾ ಎಸ್ಪಿ ಅರುಣ್ ಬಾಲಗೋಪಾಲನ್, ಹಿಂಸೆಯ ತಾಯಿಬೇರಾಗಿರುವ ಸಾತಾನ್‌ ಕುಳದ ಬಾಲಕೃಷ್ಣನ್, ರಘುಗಣೇಶ್, ಇನ್ಸ್‌ಪೆಕ್ಟರ್ ಶ್ರೀಧರ್‌ರವರ ಸೂಚನೆಯ ಮೇರೆಗೆ ಥಳಿಸಲು ಮತ್ತು ಕೊಲ್ಲಲು ಹಿಂದೆ ಮುಂದೆ ನೋಡದ ಸಂಘೀ ನಿಯಂತ್ರಣದಲ್ಲಿರುವ ಪ್ರದೇಶದ ಗೂಂಡಾಪಡೆಗಳು ಇವರೆಲ್ಲರೂ ಆರೋಪಿಗಳಾದ ವಿಚಾರವು ಮಾಧ್ಯಮದ ಗಮನ ಸೆಳೆಯಲು ವಿಫಲವಾದೊಡನೆ ಜನಸಾಮಾನ್ಯರು ಮರೆತು ಬಿಡುವರು. ಈಗಾಗಲೇ ದಿನನಿತ್ಯ ಐದು ಕಸ್ಟಡಿ ಸಾವು ನಡೆಯುವ ದೇಶವೆಂಬ ಕುಖ್ಯಾತಿಯನ್ನು ನಮ್ಮ ದೇಶ ಪಡೆದುಕೊಂಡಿದೆ.

 ಕಳೆದ ವರ್ಷದಲ್ಲೇ 1,731 ಕಸ್ಟಡಿ ಸಾವು ಸಂಭವಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯದಲ್ಲಿ ಕೊಲೆಪಾತಕ ಪೊಲೀಸರು ಅಧಿಕ ಸಂಖ್ಯೆಯಲ್ಲಿದ್ದಾರೆ. ಶೇ.90ಕ್ಕಿಂತ ಹೆಚ್ಚು ಕಸ್ಟಡಿ ಸಾವುಗಳು ಪೊಲೀಸರ ದೌರ್ಜನ್ಯದಿಂದ ನಡೆದದ್ದು ಸಾಬೀತಾಗಿದೆ. ಶರೀರಕ್ಕೆ ಮೊಳೆ ಹೊಡೆಯುವುದು, ರೋಲ್ ಹಾಕುವುದು, ಕೈ ಕಾಲನ್ನು ಕಟ್ಟಿ ರಾಟೆಗೆ ಹಾಕುವುದು, ವಿದ್ಯುತ್ ಶಾಕ್ ನೀಡುವುದು, ಕಾದ ಕಬ್ಬಿಣವನ್ನು ಶರೀರಕ್ಕೆ ತಾಗಿಸುವುದು, ಉಗುರುಗಳನ್ನು ಎಳೆಯುವುದು, ತಲೆಕೆಳಗಾಗಿ ನೇತಾಡಿಸುವುದು, ಬಾಯಿಗೆ ಮೂತ್ರ ಮಾಡುವುದು, ಗುದದ್ವಾರಕ್ಕೆ ಕಬ್ಬಿಣದ ರಾಡ್ ಹಾಕುವುದು ಮುಂತಾದ ಅಮಾನವೀಯ ಹಿಂಸಾ ದೌರ್ಜನ್ಯಗಳನ್ನು ಲಾಗಾಯ್ತಿನಿಂದಲೂ ಪೊಲೀಸರು ಪ್ರಯೋಗಿಸುತ್ತಿದ್ದಾರೆ.

 ದೌರ್ಜನ್ಯಕ್ಕೆ ಒಳಗಾಗುವವರಲ್ಲಿ ಹೆಚ್ಚಿನವರು ಬಡ ದಲಿತರು ಮತ್ತು ಮುಸ್ಲಿಮರಾಗಿರುತ್ತಾರೆ. (ಮುಸ್ಲಿಮ್ ಎಂದು ತಪ್ಪಾಗಿ ತಿಳಿದು ಮಧ್ಯ ಪ್ರದೇಶದ ಬೆಟ್ಟುಲಿ ಎಂಬ ಪ್ರದೇಶದಲ್ಲಿ ದೀಪಕ್ ಎಂಬ ವಕೀಲನನ್ನು ಪೊಲೀಸರು ತೀವ್ರವಾಗಿ ಥಳಿಸಿದ್ದರು.) ಲಾಕಪ್ ಹಿಂಸೆಯ ವಿರುದ್ಧ ದೊಡ್ಡ ರೀತಿಯಲ್ಲಿ ಟೀಕೆಗಳು ಕೇಳಿ ಬರುತ್ತಿವೆಯಾದರೂ, 2019ರಲ್ಲಿ ಕೇವಲ 26 ಪೊಲೀಸರು ಮಾತ್ರ ಶಿಕ್ಷೆಗೊಳಗಾಗಿದ್ದರು. ಕೇವಲ 810 ಪ್ರಕರಣಗಳು ಮಾತ್ರವೇ ದಾಖಲಾಗಿವೆ. ತದನಂತರ ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ 2,041 ಪ್ರಕರಣಗಳು ದಾಖಲಾಗಿವೆ. ಆರೋಪ ಪಟ್ಟಿಯಲ್ಲಿ ಸಲ್ಲಿಕೆಯಾಗಿರುವುದು 737 ಪ್ರಕರಣಗಳು. ಅದರಲ್ಲಿ 344 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ.

- Advertisement -