ಬಿಹಾರ ಸಿಎಂ | ಇಂದು ನಿರ್ಧರಿಸಲಿರುವ ಎನ್.ಡಿ.ಎ

Prasthutha|

ಬಿಹಾರದಲ್ಲಿ ಇಂದು ಮಧ್ಯಾಹ್ನ 12:30ಕ್ಕೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿ ಎ ) ದ ನಾಯಕರು ಸಭೆ ನಡೆಸಿ ತನ್ನ ನಾಯಕನನ್ನು ಔಪಚಾರಿಕವಾಗಿ ಆಯ್ಕೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

- Advertisement -

“ಎಲ್ಲಾ ನಾಲ್ಕು ಮೈತ್ರಿ ಒಕ್ಕೂಟದ ಚುನಾಯಿತ ಶಾಸಕರ ಸಭೆಯನ್ನು ನವೆಂಬರ್ 15ರಂದು ಮಧ್ಯಾಹ್ನ 12:30ಕ್ಕೆ ಕರೆಯಲು ನಿರ್ಧರಿಸಿದ್ದೇವೆ. ಸಭೆಯಲ್ಲಿ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಎನ್.ಡಿ.ಎ ನಾಯಕರ ಸಭೆ ಮತ್ತು ಚುನಾವಣೆಯ ನಂತರ ನಾವು ಸರಕಾರ ರಚಿಸುತ್ತೇವೆ”ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಈ ಸಭೆಯು ನಿತೀಶ್ ಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಮತ್ತೊಮ್ಮೆ ಆಯ್ಕೆ ಮಾಡಲು ಮತ್ತು ಪ್ರಮಾಣವಚನ ಸಮಾರಂಭದ ದಿನಾಂಕವನ್ನು ನಿರ್ಧರಿಸಲು ಒಂದು ಸಂದರ್ಭ ಆಗಿರಬಹುದು. ಸಭೆಯಲ್ಲಿ ಮೈತ್ರಿಕೂಟಕ್ಕೆ ಸಂಬಂಧಿಸಿದ ನಿರ್ಣಾಯಕ ನಿರ್ಧಾರಗಳನ್ನೂ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.

- Advertisement -

ಬಿಹಾರ ಚುನಾವಣೆಯಲ್ಲಿ ಬಿಜೆಪಿ 74 ಸ್ಥಾನ, ಜೆಡಿಯು 43 ಸ್ಥಾನ, ಎಚ್.ಎ.ಎಂ-ಎಸ್ ಮತ್ತು ವಿಐಪಿ ತಲಾ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡು ಎನ್.ಡಿ.ಎ. ಒಟ್ಟು 125 ಸದಸ್ಯ ಬಲದೊಂದಿಗೆ ಸರಳ ಬಹುಮತವನ್ನು ಪಡೆದುಕೊಂಡಿದೆ.

Join Whatsapp