ಕೊರೋನ ಭಯಬಿಡಿ | ಅ.1ರಿಂದ ಪದವಿ, ಸ್ನಾತಕೋತ್ತರ ಪದವಿ ಕಾಲೇಜು ಆರಂಭ

Prasthutha|

ಬೆಂಗಳೂರು : ಕೊರೋನಾ ಸಂಕಷ್ಟದಿಂದಾಗಿ ಕಳೆದ ಮಾರ್ಚ್ ನಿಂದ ಸುದೀರ್ಘ ಕಾಲದ ವರೆಗೆ ಮುಚ್ಚಲ್ಪಟ್ಟಿರುವ ಪದವಿ ಕಾಲೇಜುಗಳನ್ನು ಅಕ್ಟೋಬರ್ 1ರಿಂದ ಆರಂಭಿಸಲು ಚಿಂತನೆ ನಡೆದಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಸುತ್ತೋಲೆ ಬಿಡುಗಡೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಗತ್ಯ ಮುಂಜಾಗೃತಾ ಕ್ರಮ ಕೈಗೊಂಡು, ಅ.1ರಿಂದ ರಾಜ್ಯದಲ್ಲಿ ಸ್ನಾತಕ, ಸ್ನಾತಕೋತ್ತರ ತರಗತಿಗಳು ಆರಂಭಿಸಲಾಗುತ್ತದೆ. ಸೆ.1ಕ್ಕೆ ಆನ್ ಲೈನ್ ತರಗತಿ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮಾಹಿತಿ ರವಾನಿಸಿದೆ ಎನ್ನಲಾಗುತ್ತಿದ್ದು, ಇನ್ನೂ ಅಧಿಕೃತ ಆದೇಶ ಜಾರಿಯಾಗಿಲ್ಲ. ಇನ್ನೊಂದೆಡೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹಾಗೂ ಪಿಯುಸಿ ತರಗತಿಗಳು ಸದ್ಯಕ್ಕೆ ತೆರೆಯುವ ಬಗ್ಗೆ ಯಾವುದೇ ನಿರ್ಧಾರಗಳಾಗಿಲ್ಲ.

- Advertisement -