18 ವರ್ಷ ಪೂರೈಸಿದ ಯುವ ಮತದಾರರ ನೋಂದಣಿಗೆ ಸೂಚನೆ

Prasthutha|

 ಮೈಸೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜನವರಿ 1, 2021ಕ್ಕೆ ಅನ್ವಯವಾಗುವಂತೆ 18 ವರ್ಷ ಪೂರೈಸಿದ ಯುವ ಹಾಗೂ ಭವಿಷ್ಯದ ಮತದಾರರು ನಮೂನೆ-6ನ್ನು ಅಂತರ್ಜಾಲದಲ್ಲಿ ಅಥವಾ ನೇರವಾಗಿ ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹತ್ತಿರದ ಮತಗಟ್ಟೆ ಅಧಿಕಾರಿಗಳ (ಬಿ.ಎಲ್.ಒ) ಮೂಲಕ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯವರ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

- Advertisement -

ಮತದಾರರ ಪಟ್ಟಿಯ ಹೆಸರು ನೋಂದಾವಣಿ, ತಿದ್ದುಪಡಿ ಅಥವಾ ಹೆಸರು ತೆಗೆದು ಹಾಕಲು ಅಕ್ಟೋಬರ್ 31 ರವರೆಗೆ ಅವಕಾಶ ನೀಡಲಾಗಿದೆ. ನವೆಂಬರ್ 16ರಂದು ಕರಡು ಮತದಾರರ ಪಟ್ಟಿ ಪ್ರಕಟಣೆಯಾಗಲಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನವೆಂಬರ್ 16ರಿಂದ ಡಿಸೆಂಬರ್ 15ರ ವರೆಗೆ ಅವಕಾಶ ನೀಡಲಾಗಿದೆ.

ಮತದಾರರು NVSP portal ಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರಗಳು (Common Service Centers) ಗಳಲ್ಲಿ ಮತ್ತು BLO ಇಂದ ERO ವರೆಗೆ ಯಾವುದಾದರೂ ಚುನಾವಣಾ ಅಧಿಕಾರಿ / ನೌಕರರಿಗೆ ಅರ್ಜಿಯನ್ನು ಸಲ್ಲಿಸಿ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು.

- Advertisement -

ವಿಳಾಸ ಬದಲಾವಣೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ನಮೂನೆ-8 ಹಾಗೂ ನಮೂನೆ-8ಎ (ವಿಧಾನಸಭಾ ಕ್ಷೇತ್ರದೊಳಗೆ) ರಲ್ಲಿ ಅರ್ಜಿಯನ್ನು (ಅರ್ಜಿಯನ್ನು ಮತದಾರರಿಂದ ಪಡೆದು) ದಾಖಲಿಸಿ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಮೃತ / ಸ್ಥಳಾಂತರಗೊಂಡ ಮತದಾರರು ಕಂಡು ಬಂದಲ್ಲಿ ನಮೂನೆ-7 ರಲ್ಲಿ ಅರ್ಜಿಯನ್ನು (ಸ್ವಯಂ ಸ್ಥಳಾಂತರಗೊಂಡ ಮತದಾರರ / ಕುಟುಂಬದ ಸದಸ್ಯರಿಂದ / ಹತ್ತಿರದ ಸಂಬಂಧಿಕರಿಂದ ಅರ್ಜಿಯನ್ನು ಪಡೆದು) ದಾಖಲಿಸಿ ಮತದಾರರ ಪಟ್ಟಿಯಿಂದ ಕೈ ಬಿಡಬಹುದಾಗಿದೆ.

ಅರ್ಹ, ನೊಂದಣಿಯಾಗದ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ನಮೂನೆ-6 ರಲ್ಲಿ ಅರ್ಜಿಯನ್ನು ದಾಖಲಿಸಿಕೊಳ್ಳಬಹುದಾಗಿದೆ.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತದಾರರು ಉಪ ಆಯುಕ್ತರು, ಕಂದಾಯ, ಮೈಸೂರು ಮಹಾನಗರ ಪಾಲಿಕೆಯ ದೂರವಾಣಿ ಸಂಖ್ಯೆ 0821-2424070 ಅನ್ನು ಸಂಪರ್ಕಿಸುವುದು, ಚಾಮರಾಜ ವಿಧಾನಸಭಾ ಕ್ಷೇತ್ರದ ಮತದಾರರು ಉಪ ಆಯುಕ್ತರು, ಆಡಳಿತ, ಮೈಸೂರು ಮಹಾನಗರ ಪಾಲಿಕೆ, 0821-2418840 ಅನ್ನು ಸಂಪರ್ಕಿಸುವುದು ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರು ಕೌನ್ಸಿಲ್ ಸೆಕ್ರೆಟರಿ, ಮೈಸೂರು ಮಹಾನಗರ ಪಾಲಿಕೆ, 0821-2418819 ಅನ್ನು ಸಂಪರ್ಕಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ಮತದಾರರ ನೋಂದಣಾಧಿಕಾರಿ ಹಾಗೂ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp