ಒಂದು ವರ್ಷ ಕಾಲ ಪತ್ನಿಯನ್ನು ಶೌಚಾಲಯದಲ್ಲಿ ಕೂಡಿಟ್ಟ ಪತಿ

Prasthutha|


ಪಾಣಿಪತ್ (ಹರ್ಯಾಣ) : ಪತಿಯಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಶೌಚಾಲಯದಲ್ಲಿ ಬಂಧಿಯಾಗಿದ್ದ ಯುವತಿಯನ್ನು ಮಹಿಳಾ ರಕ್ಷಣಾ ಅಧಿಕಾರಿಗಳು ರಕ್ಷಿಸಿದ್ದಾರೆ. ಮಹಿಳಾ ರಕ್ಷಣೆ ಮತ್ತು ಬಾಲ್ಯ ವಿವಾಹ ತಡೆಗಟ್ಟುವ ಅಧಿಕಾರಿ ರಜನಿ ಗುಪ್ತಾ ಮತ್ತು ಅವರ ತಂಡ ರಿಷ್ಪುರ ಗ್ರಾಮದ ಮನೆಯೊಂದರಿಂದ ಯುವತಿಯನ್ನು ರಕ್ಷಿಸಿದೆ.

- Advertisement -


“ಒಂದು ವರ್ಷಕ್ಕೂ ಹೆಚ್ಚು ಕಾಲ ಯುವತಿಯನ್ನು ಶೌಚಾಲಯದಲ್ಲಿ ಬಂಧಿಸಲಾಗಿದೆ ಎಂದು ನನಗೆ ಮಾಹಿತಿ ಲಭಿಸಿತು. ನಾನು ಮತ್ತು ನನ್ನ ತಂಡ ಅಲ್ಲಿಗೆ ಆಗಮಿಸಿದಾಗ ಅದು ನಿಜವೆಂದು ಸಾಬೀತಾಯಿತು. ಅವರು ಹಲವು ದಿನಗಳಿಂದ ಏನೂ ತಿನ್ನಲಿಲ್ಲವೆಂದು ತೋರುತ್ತದೆ” ಎಂದು ರಜನಿ ಗುಪ್ತಾ ಹೇಳುತ್ತಾರೆ. ಯುವತಿ ಮಾನಸಿಕ ಅಸ್ವಸ್ಥೆ ಎಂದು ಪತಿ ನರೇಶ್ ಹೇಳುತ್ತಿದ್ದಾನೆ. ಆದರೆ ಮಹಿಳಾ ಸಂರಕ್ಷಣಾ ಅಧಿಕಾರಿ ಇದು ಸುಳ್ಳು. ನಾನು ಅವಳೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.
ಪತಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಲಾಗಿದೆ. ಯುವತಿಯನ್ನು ಪರೀಕ್ಷೆಗೆ ಒಳಪಡಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp