ಹಥ್ರಾಸ್ ಸಂತ್ರಸ್ತೆ ದಾಖಲಾಗಿದ್ದ ಆಸ್ಪತ್ರೆಯ CCTV ದೃಶ್ಯಗಳೆಲ್ಲ ಡಿಲೀಟ್ !

Prasthutha: October 15, 2020

ಆಗ್ರಾ: ಹತ್ರಾಸ್ ನ 19 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ, ಆಕೆಯನ್ನು ಮೊದಲು ಕರೆದುಕೊಂಡು ಹೋಗಿದ್ದ ಜಿಲ್ಲಾ ಆಸ್ಪತ್ರೆಯಲ್ಲಿ ವಿಚಾರಣೆ ಕೈಗೊಂಡಿದೆ. ಯುವತಿಯನ್ನು ಸೆಪ್ಟಂಬರ್ 14 ರಂದು ಆಸ್ಪತ್ರೆಗೆ ಮೊದಲು ದಾಖಲಿಸಲಾಗಿತ್ತು. ಆದರೆ ಸಿಬಿಐ ತಂಡಕ್ಕೆ ಅಚ್ಚರಿಯೆಂಬಂತೆ ಆಸ್ಪತ್ರೆಯ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ಆ ದಿನದ ಸಿಸಿಟಿವಿ ದೃಶ್ಯಾವಳಿಗಳು ಡಿಲೀಟ್ ಆಗಿದೆ ಎನ್ನಲಾಗಿದೆ

‘ಆ ಸಮಯದಲ್ಲಿ ಜಿಲ್ಲಾ ಆಡಳಿತ ಮತ್ತು ಪೊಲೀಸರು ಫೂಟೇಜ್ ಕೇಳಿರಲಿಲ್ಲ. ಈಗ ಒಂದು ತಿಂಗಳ ನಂತರ ಅದನ್ನು ನೀಡಲು ಸಾಧ್ಯವಿಲ್ಲ’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಇಂದ್ರ ವೀರ್ ಸಿಂಗ್ ಹೇಳಿದ್ದಾರೆ. ಯಾರಾದರೂ ಕೇಳಿದ್ದರೆ ಆಸ್ಪತ್ರೆ ಉಳಿಸಬಹುದಿತ್ತು ಎಂದು ಅವರು ಹೇಳಿದರು. “ಹಿಂದಿನ ಫೂಟೇಜ್ ಪ್ರತಿ ಏಳು ದಿನಗಳಿಗೊಮ್ಮೆ ಅಳಿಸಲಾಗುತ್ತದೆ ಮತ್ತು ಅದರ ಮೇಲೆ ಹೊಸ ಫೂಟೇಜ್ ಗಳನ್ನು ರೆಕಾರ್ಡ್ ಮಾಡಲಾಗುತ್ತದೆ.”

ಸಿಬಿಐ ತಂಡ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಹೇಳಿಕೆ ದಾಖಲಿಸಿ ಸಾಕ್ಷ್ಯಗಳನ್ನು ಪರಿಶೀಲಿಸಿತ್ತು. ಮೊದಲ ದಿನದ ಫೂಟೇಜ್ ನಿರ್ಣಾಯಕವಾಗಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಬಿಐ ತಂಡ ವು ಆ ದೃಶ್ಯಾವಳಿಗಳನ್ನು ಪರಿಶೀಲಿಸಿ, ಯಾವಾಗ ಸಂತ್ರಸ್ತೆಯನ್ನು ಕರೆತರಲಾಗಿದೆ, ಯಾವಾಗ ಹೊರಗೆ ಹೋಗಲಾಯಿತು, ಯಾರು ಆಕೆಯ ಜೊತೆ ಮಾತುಕತೆ ನಡೆಸಿದಳು ಮತ್ತು ಆಕೆ ಇದ್ದಾಗ ಯಾರು ಮಾತನಾಡುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲು ಸಿಬಿಐ ತಂಡ ಬಯಸಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಮತ್ತು ಆಡಳಿತ ವು ಈ ಹಿಂದೆ ಫೂಟೇಜ್ ಅನ್ನು ಏಕೆ ಕೇಳಲಿಲ್ಲ ಎಂದು ಕೇಳಿದಾಗ, ಅಪರಾಧ ಸಂಬಂಧಿತ ತನಿಖೆಗೂ ಆಸ್ಪತ್ರೆಗೂ ಸಂಬಂಧವಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ‘ಆಸ್ಪತ್ರೆಯಲ್ಲಿ ಯಾವುದೇ ಅಪರಾಧ ನಡೆದಿಲ್ಲ, ನಿರ್ಲಕ್ಷ್ಯ ದ ಬಗ್ಗೆ ವರದಿ ಯಾಗಿಲ್ಲ. ಇವು ಸಂಬಂಧವೇ ಇಲ್ಲದ ಸಂಗತಿಗಳು. ಹೀಗಾಗಿ ಸಿಸಿ ಟಿವಿ ಫೂಟೇಜ್ ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ’ ಎಂದು ಹೇಳಿದ್ದಾರೆ.

ಈ ಮಧ್ಯೆ, ಸಂತ್ರಸ್ತೆಯ ಸಹೋದರರು ಮತ್ತು ತಂದೆ, ಬುಧವಾರ ಬೆಳಗ್ಗೆ 11.30ಕ್ಕೆ ಆರಂಭವಾದ ಏಳು ಗಂಟೆಗಳ ಕಾಲ ಸಿಬಿಐ ವಿಚಾರಣೆ ನಡೆಸಿತ್ತು. ನಂತರ ಸ್ಥಳೀಯ ಪೊಲೀಸರು ಅವರನ್ನು ಮನೆಗೆ ಡ್ರಾಪ್ ಮಾಡಿದ್ದಾರೆ. ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಅಲಿಗಢ ಜೈಲಿನಿಂದ ಹೊರಹಾಕಬೇಕೆಂದು ಸಂತ್ರಸ್ತ ಕುಟುಂಬ ವು ಈ ಹಿಂದೆ ಆಗ್ರಹಿಸಿತ್ತು. ಹತ್ರಾಸ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಂಜಲಿ ಗಂಗ್ವಾರ್ ಅವರು ಈ ಮನವಿಯನ್ನು ಹಿರಿಯ ಅಧಿಕಾರಿಗಳು ಪರಿಗಣಿಸಲಿದ್ದಾರೆ ಎಂದು ಹೇಳಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!