ಎಸ್.ಡಿ.ಪಿ.ಐ ಬೆಂಬಲ | ಕಾಂಗ್ರೆಸ್ ತೆಕ್ಕೆಗೆ ಬಂಟ್ವಾಳ ಪುರಸಭೆ

Prasthutha|

ಅಧ್ಯಕ್ಷರಾಗಿ ಶರೀಫ್, ಉಪಾಧ್ಯಕ್ಷರಾಗಿ ಜಸಿಂತಾ ಡಿಸೋಝಾ ಆಯ್ಕೆ

- Advertisement -

ಬಂಟ್ವಾಳ: ಬಂಟ್ವಾಳ ಪುರಸಭೆಗೆ ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಬೆಂಬಲದೊಂದಿಗೆ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ತಲಾ 16 ಮತಗಳನ್ನು ಪಡೆದು ಕಾಂಗ್ರೆಸ್ ನ ಶರೀಫ್ ಪರ್ಲಿಯಾ ಅಧ್ಯಕ್ಷರಾಗಿ ಮತ್ತು ಜಸಿಂತಾ ಡಿಸೋಝಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಒಟ್ಟು 27 ಸದಸ್ಯ ಬಲದ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ 12 ಸೀಟು ಮತ್ತು ಎಸ್.ಡಿ.ಪಿ.ಐ 4 ಸೀಟುಗಳನ್ನು ಹೊಂದಿದ್ದವು. ಬಿಜೆಪಿ 11 ಸೀಟುಗಳನ್ನು ಹೊಂದಿದ್ದು, ಸ್ಥಳೀಯ ಶಾಸಕರು ಮತ್ತು ಸಂಸದರ ತಲಾ ಒಂದು ಮತ ಒಳಗೊಂಡಂತೆ ಒಟ್ಟು 13 ಮತಗಳನ್ನು ಹೊಂದಿತ್ತು.ಈ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಗೋವಿಂದ್ ಪೈ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಿನಾಕ್ಷಿ 13 ಮತಗಳನ್ನು ಪಡೆದುಕೊಂಡರು.

- Advertisement -


ಬಂಟ್ವಾಳ ಪುರಸಭೆಯಲ್ಲಿ 4 ಸದಸ್ಯ ಬಲದೊಂದಿಗೆ ಎಸ್.ಡಿ.ಪಿ.ಐ ಕಿಂಗ್ ಮೇಕರ್ ಆಗಿತ್ತು. ಮಾತ್ರವಲ್ಲ, ಎಸ್.ಡಿ.ಪಿ.ಐ ನೆರವಿನ ವಿನಃ ಇಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೇರಲು ಸಾಧ್ಯವಿರಲಿಲ್ಲ. ಅಂತಿಮವಾಗಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದೊಂದಿಗೆ ಎಸ್.ಡಿ.ಪಿ.ಐ ಕಾಂಗ್ರೆಸ್ ಗೆ ಬೆಂಬಲ ನೀಡುವ ದಿಟ್ಟ ನಿಲುವನ್ನು ತಾಳಿತು.

ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಉಪಸ್ಥಿತಿಯ ನಡುವೆಯೂ  ಬಿಜೆಪಿ ಇಲ್ಲಿ ಹಿನ್ನೆಡೆ ಅನುಭವಿಸಿದ್ದು, ಇದಕ್ಕೆ ಎಸ್ಡಿಪಿಐ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದು ಪ್ರಮುಖ ಕಾರಣವಾಗಿದೆ.

Join Whatsapp