ಮೂವರು ಹೆಂಡಿರ ಮುದ್ದಿನ ಗಂಡಗೆ ಜೊತೆಜೊತೆಯಲಿ ‘ಕರ್ವಾ ಚೌತ್’!

Prasthutha: November 7, 2020

ಚಿತ್ರಕೂಟ : ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ನಿವಾಸಿ ಕೃಷ್ಣ ಎಂಬಾತನಿಗೆ ಬುಧವಾರ ನಡೆದ ‘ಕರ್ವಾ ಚೌತ್’ ಹಬ್ಬದ ಪ್ರಯುಕ್ತ ಮೂವರು ಪತ್ನಿಯಂದಿರಿಂದ ದೀರ್ಘಾಯುಷ್ಯದ ಪ್ರಾರ್ಥನೆ ಒಟ್ಟೊಟ್ಟಿಗೇ ಸಲ್ಲಿಕೆಯಾಯಿತು.

ಕೃಷ್ಣ 12 ವರ್ಷಗಳ ಹಿಂದೆ ಶೋಭಾ, ರೀನಾ, ಪಿಂಕಿ ಎಂಬ ಮೂವರು ಖಾಸಾ ಸಹೋದರಿಯರನ್ನು ವಿವಾಹವಾಗಿದ್ದ. ಮೂವರು ಪತ್ನಿಯರೂ ತಲಾ ಇಬ್ಬರು ಮಕ್ಕಳನ್ನು ಕೃಷ್ಣನಿಂದ ಇವರು ಪಡೆದಿದ್ದಾರೆ.

ಒಂದೇ ಮನೆಯಲ್ಲಿ ಮೂವರು ಪತ್ನಿಯರು ವಾಸಿಸುತ್ತಿದ್ದರೂ, ಯಾವುದೇ ಭಿನ್ನಭಿಪ್ರಾಯವಿಲ್ಲದೆ ಪರಸ್ಪರ ಸೌಹಾರ್ಧತೆಯಿಂದ ಜೀವನ ನಡೆಸುತ್ತಿದ್ದಾರೆ.

ಮೂವರು ಪತ್ನಿಯರೂ ಪದವೀದರರು, ತಮ್ಮ ಮಕ್ಕಳೂ ಸೌಹಾರ್ಧತೆಯಿಂದ ಬದುಕುತ್ತಾರೆ ಎಂಬ ಭರವಸೆ ಅವರದ್ದು. 12 ವರ್ಷಗಳಿಂದ ಜೀವನ ನಡೆಯುತ್ತಿದೆ. ಮೂವರು ಸಹೋದರಿಯರನ್ನು ಒಂದೇ ಕಾರ್ಯಕ್ರಮದಲ್ಲಿ ಯಾಕೆ ವಿವಾಹವಾದೆ ಎಂಬುದರ ಬಗ್ಗೆ ಕೃಷ್ಣ ತಮಗೆ ಯಾವತ್ತೂ ಹೇಳಿಲ್ಲ ಎಂದು ಸಂಬಂಧಿಯೊಬ್ಬರು ಹೇಳುತ್ತಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ