ಈಗ ನಿಮ್ಮ ಟ್ವೀಟ್ ಗೆ ಯಾರು ರಿಪ್ಲೈ ಮಾಡಬಹುದು, ನೀವೇ ನಿರ್ಧರಿಸಿ

Prasthutha|

ನ್ಯೂಯಾರ್ಕ್ : ಹಲವು ತಿಂಗಳುಗಳ ಪರೀಕ್ಷೆಯ ನಂತರ ಈಗ ಟ್ವಿಟರ್ ಹೊಸ ಫೀಚರ್ ಒಂದನ್ನು ಪರಿಚಯಿಸಿದ್ದು, ಈ ಮೂಲಕ ನಿಮ್ಮ ಪೋಸ್ಟ್ ಗಳಿಗೆ ಯಾರು ಪ್ರತಿಕ್ರಿಯಿಸಬಹುದು ಎಂಬುದನ್ನು ನೀವೇ ನಿರ್ಧರಿಸಬಹುದಾಗಿದೆ. ನಿಮ್ಮ ಪೋಸ್ಟ್ ಗೆ ಯಾರು ಕಾಮೆಂಟ್ ಮಾಡಬೇಕು, ಯಾರು ರಿಪ್ಲೈ ಮಾಡಬೇಕು ಎಂಬುದನ್ನು ನಿರ್ಧರಿಸುವ ಆಪ್ಶನ್ ಗಳನ್ನು ನೀಡಲಾಗಿದೆ.

ಜಗತ್ತಿನಾದ್ಯಂತ ಈ ಸೇವೆ ಈಗ ಲಭ್ಯವಿದ್ದು, ಟ್ವಿಟರ್ ಬಳಕೆದಾರರಿಗೆ ಇದೊಂದು ದೊಡ್ಡ ಸಮಾಧಾನವನ್ನುಂಟು ಮಾಡುವ ಅವಕಾಶವಾಗಿದೆ. ತಮ್ಮ ಪೋಸ್ಟ್ ಗಳಿಗೆ ಅನಗತ್ಯವಾಗಿ ಗುರಿ ಮಾಡುವವರಿಂದ ಪಾರಾಗಲು ಇದು ಬಳಕೆದಾರರಿಗೆ ಒಳ್ಳೆಯ ಅವಕಾಶವನ್ನು ನೀಡಿದೆ. ಈ ಕುರಿತು ಟ್ವಿಟರ್ ಪ್ರೊಡಕ್ಟ್ ಮುಖ್ಯಸ್ಥೆ ಸುಝಾನೆ ಕ್ಷಿ ಮಾಹಿತಿ ನೀಡಿದ್ದಾರೆ.

- Advertisement -

ಹೊಸ ಫೀಚರ್ ರಾಜಕಾರಣಿಗಳು, ನಟರು, ಪತ್ರಕರ್ತರು, ಸೆಲೆಬ್ರಿಟಿಗಳಿಗೆ ಅನುಕೂಲವಾಗಿದೆ. ತಮ್ಮ ಫಾಲೋರ್ವಸ್ ಕಾಮೆಂಟ್ ಮಾಡಬಹುದೇ ಇಲ್ಲವೇ ಎಂಬ ಆಯ್ಕೆಯನ್ನು ಆಯ್ದುಕೊಳ್ಳುವ ಅವಕಾಶವಿದೆ.  #Everyone #people You fallow, #only people you mention ಈ ಮೂರು ಆಯ್ಕೆಗಳನ್ನು ಬಳಸಿಕೊಳ್ಳಬಹುದಾಗಿದೆ. ಆ ಮೂಲಕ ತಮ್ಮ ಪೋಸ್ಟ್ ಗಳಿಗೆ ಯಾರಾದರೂ ಪ್ರತಿಕ್ರಿಯಿಸಬಹುದು, ನಾವು ಫಾಲೊ ಮಾಡುವ ವ್ಯಕ್ತಿಗಳು ಮಾತ್ರ ಪ್ರತಿಕ್ರಿಯಿಸಬಹುದು ಅಥವಾ ನೀವು ಸೂಚಿಸಿದ ವ್ಯಕ್ತಿಗಳು ಮಾತ್ರ ಪ್ರತಿಕ್ರಿಯಿಸಬಹುದು ಎಂಬ ಮೂರು ಆಯ್ಕೆಗಳಿವೆ.

- Advertisement -