ಒಂದು ಇಮೇಲ್ ಸಂದೇಶದ ಮೂಲಕ ಅರ್ಧ ಗಂಟೆಯಲ್ಲಿ 1,300 ಉದ್ಯೋಗ ಕಿತ್ತ ಜೂಮ್

Prasthutha|

ನವದೆಹಲಿ: ಸಂವಹನ ತಂತ್ರಜ್ಞಾನ ಸಂಸ್ಥೆಯಾದ ಜೂಮ್ ತನ್ನ ನೌಕರರಲ್ಲಿ 15% ಎಂದರೆ 1,300 ಮಂದಿಯನ್ನು ತೆಗೆಯುತ್ತಿರುವುದಾಗಿ ಸಂಸ್ಥೆಯ ಕಾರ್ಯಕಾರಿ ಮುಖ್ಯಸ್ಥ ಎರಿಕ್ ಯುವಾನ್ ಅವರು ಕಂಪೆನಿಯ ಅಧಿಕೃತ ಬ್ಲಾಗ್’ನಲ್ಲಿ ಪ್ರಕಟಿಸಿದ್ದಾರೆ.

- Advertisement -


ಎಲ್ಲ ಕಠಿಣ ದುಡಿಮೆಯ, ಸಾಮರ್ಥ್ಯಶಾಲಿ ಸಹೋದ್ಯೋಗಿಗಳು ಎಂದು ಕರೆದಿರುವ ಯುವಾನ್ ಅವರು ಯುಎಸ್’ಎಯಲ್ಲಿ ಇರುವ ನೌಕರರಿಗೆ ಅರ್ಧ ಗಂಟೆಯಲ್ಲಿ ಕಿತ್ತು ಹಾಕಿದ ಇಮೇಲ್ ಹೋಗುತ್ತದೆ; ಹೊರ ದೇಶಗಳಲ್ಲಿ ಇರುವ ತೆಗೆಯಲಾಗುವ ನೌಕರರಿಗೂ ಅಲ್ಲಿನ ನಿಯಮದಂತೆ ಬೇಗನೆ ಈಮೇಲ್ ಮಾಹಿತಿ ಹೋಗುತ್ತದೆ ಎಂದು ಅವರು ಹೇಳಿದರು.
“ನೀವು ಯುಎಸ್’ಎ ವಾಸಿಯಾದರೆ 30 ನಿಮಿಷದಲ್ಲಿ ನಿಮ್ಮ ಜೂಮ್ ಮೇಲ್ ಬಾಕ್ಸ್’ ನಲ್ಲಿ ತೆಗೆದು ಹಾಕಿದ ಸುದ್ದಿ ಇರುತ್ತದೆ. ಇಂಪ್ಯಾಕ್ಟೆಡ್ ಎಂಬ ಅದನ್ನನುಸರಿಸಿ ನೀವು ಏನು ಮಾಡಬೇಕು ಎಂಬುದೂ ಅದರಲ್ಲಿರುತ್ತದೆ. ಯುಎಸ್’ಎ ನಿವಾಸಿಗಳಲ್ಲದವರಿಗೆ ಸ್ಥಳೀಯ ಕಚೇರಿಗಳ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಯುವಾನ್ ತಿಳಿಸಿದ್ದಾರೆ.
ಯುಎಸ್’ಎಯಲ್ಲಿ ಕೆಲಸ ಕಳೆದುಕೊಳ್ಳುವ ಜೂಮೀಗಳು 16 ವಾರಗಳ ಹೆಚ್ಚುವರಿ ಸಂಬಳ, ಆರೋಗ್ಯ ಸವಲತ್ತು, 2023ರಲ್ಲಿ ಅವರ ಇಲ್ಲಿಯವರೆಗಿನ ಕೆಲಸದ ಮೇಲೆ ಬೋನಸ್ ಸಿಗಲಿದೆ; ಆರು ತಿಂಗಳೊಳಗೆ ಪಡೆಯಬಹುದು. ಯುಎಸ್’ಎಯೇತರ ದೇಶದಲ್ಲಿ ಆಗಸ್ಟ್ 9, 2023 ಇದಕ್ಕೆ ಕೊನೆಯ ದಿನವಾಗಿದೆ.


ಯುಎಸ್’ಎ ಹೊರಗಿನ ಜೂಮೀಗಳು ಸಹ ಇದೇ ಮಾನದಂಡದಲ್ಲಿ ಸ್ಥಳೀಯ ಕಾಯ್ದೆಯನುಸಾರ ಪಡೆಯುವರು ಎಂದೂ ಯುವಾನ್ ಹೇಳಿದ್ದಾರೆ.
ಕೋವಿಡ್ ಕಾಲದಲ್ಲಿ ತಂತ್ರಜ್ಞಾನ ಕಂಪೆನಿಗಳು ಮನೆಯಲ್ಲೇ ಕೆಲಸದ ಅನುಕೂಲ ಮಾಡಿಕೊಟ್ಟರೂ ದೀರ್ಘ ಕಾಲದಿಂದ ಪೂರ್ಣ ಮರಳಲು ಸಾಧ್ಯವಾಗಿಲ್ಲದಿರುವುದರಿಂದ ಕೆಲಸಗಾರರನ್ನು ತೆಗೆಯುತ್ತಿದ್ದು, ಈಗ ಆ ಸಾಲಿಗೆ ಜೂಮ್ ಸೇರಿದೆ. ತಾತ್ಕಾಲಿಕವಾಗಿ ಸಂವಹನ ಮತ್ತು ತಂತ್ರಾಂಶ ಸೇವೆ ಪಡೆದವರು ಕೂಡ ಅವರನ್ನು ಈಗ ಬಿಡುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ.

Join Whatsapp