ಕ್ರಿಶ್ಚಿಯನ್ನರ ಮೇಲೆ ದಾಳಿ; ಕರ್ನಾಟಕ ಸೇರಿ ಎಂಟು ರಾಜ್ಯಗಳಿಂದ ವರದಿ ಕೇಳಿದ ಸರ್ವೋಚ್ಚ ನ್ಯಾಯಾಲಯ

Prasthutha|

ನವದೆಹಲಿ: ಕ್ರಿಶ್ಚಿಯನ್ನರು ಮತ್ತು ಚರ್ಚ್’ಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗೆಗಿನ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಬಿಹಾರ, ಛತ್ತೀಸ್’ಗಡ, ಜಾರ್ಖಂಡ್, ಒಡಿಶಾ, ಕರ್ನಾಟಕ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ ಸರಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡುವಂತೆ ಸೂಚನೆ ನೀಡಿದೆ.

- Advertisement -


ದಾಳಿ ಮತ್ತು ಅದರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಯಿತು ಎಂಬುದನ್ನು ಕೂಡಲೆ ತಿಳಿಸುವಂತೆಯೂ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಬೆಂಗಳೂರು ಧರ್ಮ ಪ್ರಾಂತ್ಯದ ಆರ್ಚ್ ಬಿಷಪ್ ಪೀಟರ್ ಮಚಾದೊ ಅವರು ನ್ಯಾಷನಲ್ ಸಾಲಿಡಾರಿಟಿ ಫೋರಮ್, ಇವಾಂಜಲಿಕಲ್ ಫೆಲೋಶಿಪ್ ಆಫ್ ಇಂಡಿಯಾ ಜೊತೆ ಸೇರಿ ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು.


ಅದಕ್ಕೆ ಮೊದಲು ಬಿಹಾರ, ಹರಿಯಾಣ, ಛತ್ತೀಸ್’ಗಡ, ಜಾರ್ಖಂಡ್, ಒಡಿಶಾ, ಕರ್ನಾಟಕ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಈ ಎಂಟು ರಾಜ್ಯಗಳಲ್ಲಿ ಪರಿಶೀಲಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಟ್ಟಿಯವರು ಹರಿಯಾಣ ವರದಿ ನೀಡಿದೆ; ಉಳಿದ ಏಳು ರಾಜ್ಯಗಳಿಂದ ವರದಿ ಬರಬೇಕು ಎಂದು ಪೀಠಕ್ಕೆ ಮಾಹಿತಿ ನೀಡಿದರು.
ಉತ್ತರ ಪ್ರದೇಶವು ಈಗಾಗಲೇ ಮಾಹಿತಿ ಸಲ್ಲಿಸಿದೆ ಎಂದು ಅಲ್ಲಿನ ಅಡ್ವಕೇಟ್ ಜನರಲ್ ಗರಿಮಾ ಪ್ರಸಾದ್ ಹೇಳಿದರು. ಸಿಜೆಐ ಡಿ. ವೈ. ಚಂದ್ರಚೂಡ್, ಜಸ್ಟಿಸ್’ಗಳಾದ ಪಿ. ಎಸ್. ನರಸಿಂಹ, ಜೆ. ಬಿ. ಪರ್ದಿವಾಲ ವಿಚಾರಣೆ ನಡೆಸಿದರು.

- Advertisement -


“ತಾರತಮ್ಯಗಳನ್ನು ಕೊನೆಗೊಳಿಸಬೇಕು. ಇನ್ನು ಒಂದು ವಾರದೊಳಗೆ ಉತ್ತರ ಪ್ರದೇಶ ಸರಕಾರವು ಇನ್ನೊಂದು ಪ್ರತಿ ಮಾಹಿತಿಯನ್ನು 2022ರ ಸೆಪ್ಟೆಂಬರ್ 1ರ ಆದೇಶದಂತೆ ಸಲ್ಲಿಸಬೇಕು” ಎಂದು ನ್ಯಾಯಾಲಯ ಹೇಳಿತು.
ಮುಂದಿನ ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಿತು.


ಎಫ್’ಐಆರ್ ದಾಖಲಿಸುವಿಕೆ, ತನಿಖೆ ಯಾವ ಮಟ್ಟದಲ್ಲಿದೆ, ಎಷ್ಟು ಬಂಧನ ಆಗಿದೆ, ಎಷ್ಟು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ, ಹಿನ್ನೆಲೆ; ಇವೆಲ್ಲದರ ಬಗ್ಗೆ ವರದಿ ನೀಡುವಂತೆ 8 ರಾಜ್ಯಗಳಿಗೆ ಸೂಚಿಸಲಾಗಿದೆ.
ಡಾ. ಪೀಚರ್ ಮಚಾದೊ ಅರ್ಜಿಯಲ್ಲಿ ದೂರುಗಳ ಬಗ್ಗೆ ಸರಕಾರಗಳು ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೂಡಲೆ ಪರಿಗಣಿಸಬೇಕಾಗಿದೆ ಎಂದು ಮನವಿ ಮಾಡಿದ್ದರು.
ಕೇಂದ್ರ ಸರಕಾರವು ಕ್ರಿಶ್ಚಿಯನ್ನರ ಕಿರುಕುಳ ಎಂದು ಪ್ರತಿ ಅಫಿಡವಿಟನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. ಪಿಐಎಲ್ ಅರ್ಜಿದಾರರು ಕೆಲವು ಪ್ರಕರಣಗಳನ್ನು ತಮ್ಮ ಹಿತಾಸಕ್ತಿಗಾಗಿ ಹಿಗ್ಗಿಸಿ ಹೇಳಿದ್ದಾರೆ ಎಂದೂ ಕೇಂದ್ರದ ಅಫಿಡವಿಟ್ ಹೇಳಿದೆ.