1300 ಉದ್ಯೋಗಗಳನ್ನು ಕಡಿತಗೊಳಿಸಲಿರುವ ಝೂಮ್ ಕಂಪನಿ

Prasthutha|

ನವದೆಹಲಿ: ಕೋವಿಡ್ ಲಾಕ್‌’ಡೌನ್ ಸಮಯದಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಝೂಮ್ ವಿಡಿಯೊ ಕಮ್ಯೂನಿಕೇಷನ್ಸ್ ಕಂಪನಿ ಈಗ 1,300 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ತಿಳಿಸಿದೆ.

- Advertisement -

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಬೇಡಿಕೆ ಗಳಿಸಿದ್ದ ಝೂಮ್ ಆ್ಯಪ್‌ ಬಳಿಕ ಆದಾಯದಲ್ಲಿ ಕುಸಿತ ಕಂಡಿದೆ ಎಂದು ಝೂಮ್ ವಿಡಿಯೊ ಕಮ್ಯೂನಿಕೇಷನ್ಸ್ ಕಂಪನಿ ಹೇಳಿದೆ.

ಇದರಿಂದ ಜಾಗತಿಕವಾಗಿ ಕಂಪನಿಯ ಶೇ 15ರಷ್ಟು ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ಸಿಇಒ ಎರಿಕ್ ಯುವಾನ್ ತಿಳಿಸಿದ್ದಾರೆ.

- Advertisement -

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಪ್ರಸಿದ್ಧಿ ಪಡೆದಿದ್ದ ಝೂಮ್ ಆ್ಯಪ್‌ನ ಬೆಳವಣಿಗೆ ಆ ನಂತರ ಕುಸಿತಗೊಂಡಿದೆ. ಕಳೆದ ವರ್ಷ ಸಂಸ್ಥೆಯ ಶೇರುಗಳು ಶೇ 63ರಷ್ಟು ಕುಸಿತ ಕಂಡಿವೆ. 2021ರ ವಿತ್ತೀಯ ವರ್ಷದಲ್ಲಿ ಝೂಮ್ ಆದಾಯ ಒಂಬತ್ತು ಪಟ್ಟು ಅಧಿಕವಾಗಿತ್ತು. 2022ರಲ್ಲಿ ಶೇ 6.7ರಷ್ಟು ಮಾತ್ರ ಹೆಚ್ಚಳಗೊಂಡಿತ್ತು. ಅಲ್ಲದೆ 2022ರಲ್ಲಿ ಲಾಭವು ಶೇ 38ರಷ್ಟು ಕುಸಿತಗೊಂಡಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.



Join Whatsapp