ಟರ್ಕಿ ಭೂಕಂಪ| ಸಾವಿನ ಸಂಖ್ಯೆ 7,700ಕ್ಕೆ ಏರಿಕೆ; ಹತ್ತು ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ

Prasthutha|

ಟರ್ಕಿ ಸಿರಿಯಾ ಗಡಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 7,700ಕ್ಕೆ ಏರಿದೆ ಎಂದು ವರದಿಯಾಗಿದೆ. ಇದೇ ವೇಳೆ ದೇಶದ 8.5 ಕೋಟಿ ಜನರಲ್ಲಿ 1.3 ಕೋಟಿ ಜನರು ಭೂಕಂಪ ಬಾಧಿತರಾಗಿದ್ದಾರೆ. 10 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಹೇರಿರುವುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಬ್ ಎರ್ಡೋಗನ್ ಹೇಳಿದರು.

- Advertisement -

ಗಾಯಗೊಂಡವರ ಅಧಿಕೃತ ಸಂಖ್ಯೆ ಸ್ಪಷ್ಟಗೊಂಡಿಲ್ಲವಾದರೂ 50,000ದಷ್ಟು ಎನ್ನಲಾಗಿದೆ. ಸಾಕಷ್ಟು ಜನರಿಗೆ ತಾತ್ಕಾಲಿಕ ಶಿಬಿರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಸಾಕಷ್ಟು ಗಾಯಾಳು ಜನರು ಬೇರೆ ಬೇರೆ ಪ್ರದೇಶಗಳಲ್ಲಿ ಸಿಕ್ಕಿರುವುದಾಗಿಯೂ ವರದಿಯಾಗಿದೆ.

Join Whatsapp