ನವದೆಹಲಿ: ಕಂಟೆಂಟ್ ಕ್ರಿಯೇಟರ್ಸ್ ಹಾಗೂ ನಿರ್ದಿಷ್ಟ ಚಾನಲ್’ಗಳನ್ನು ಗುರಿಯಾಗಿಸಿ ನಡೆಯುತ್ತಿದ್ದ ಡಿಸ್ಲೈಕ್ ದಾಳಿಯನ್ನು ತಡೆಯಲು ಯೂಟ್ಯೂಬ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಫೇಸ್’ಬುಕ್ ಮತ್ತು ಇನ್ಸ್ಟಾಗ್ರಾಮ್ ರೀತಿಯಲ್ಲೇ ಡಿಸ್’ಲೈಕ್ ಕೌಂಟ್ ಅನ್ನು ತೆಗೆದುಹಾಕಲು ಯೂಟ್ಯೂಬ್ ನಿರ್ಧಿರಿಸಿದೆ.
ಟ್ವಿಟರ್’ನಲ್ಲಿ ತನ್ನ ಹೊಸ ತೀರ್ಮಾನವನ್ನು ತಿಳಿಸಿರುವ ಯೂಟ್ಯೂಬ್, ವೀಡಿಯೋದ ಕೆಳಗಡೆ ಇರುವ ಡಿಸ್’ಲೈಕ್ ಆಯ್ಕೆಯನ್ನು ಸಂಪೂರ್ಣವಾಗಿ ತೆಗೆಯುತ್ತಿಲ್ಲ. ಈಗ ಇರುವ ಪಬ್ಲಿಕ್ ವ್ಯೂ ಬದಲಾಗಿ ಡಿಸ್’ಲೈಕ್ ಕೌಂಟ್ ಅನ್ನು ಪ್ರೈವೇಟ್ ಮಾಡಲಾಗುತ್ತದೆ. ಅಂದರೆ ವೀಡಿಯೋ ನಿಮಗೆ ಇಷ್ಟವಾಗದಿದ್ದರೆ ನೀವು ಡಿಸ್’ಲೈಕ್ ಮಾಡಬಹುದು. ಆದರೆ ನಿರ್ದಿಷ್ಟ ವೀಡಿಯೋಗೆ ಎಷ್ಟು ಡಿಸ್’ಲೈಕ್’ಗಳು ಬಂದಿವೆ ಎಂಬುದು ಎಲ್ಲರಿಗೂ ಕಾಣಿಸುವುದಿಲ್ಲ. ಕ್ರಿಯೇಟರ್ಸ್ ಫೀಡ್’ಬ್ಯಾಕ್ಗಾಗಿ ಡಿಸ್’ಲೈಕ್ ಕೌಂಟ್ ಕಂಟೆಂಟ್ ಕ್ರಿಯೇಟರ್ಸ್’ನವರಿಗೆ ಮಾತ್ರ ಕಾಣಿಸುವಂತೆ ಹೊಸ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕ ಅವಮಾನ ಮತ್ತು ಕಿರುಕುಳ ತಪ್ಪಿಸಲು ಇದು ಸಹಕಾರಿ ಆಗಲಿದೆ ಎಂದು ಯೂಟ್ಯೂಬ್ ಹೇಳಿದೆ. ಈಗಾಗಲೇ ಫೇಸ್’ಬುಕ್ ಮತ್ತು ಇನ್ಸ್ಟಾಗ್ರಾಮ್ ಕೂಡ ಡಿಸ್’ಲೈಕ್ ಆಯ್ಕೆಯನ್ನು ಮರೆಮಾಚಿದೆ.
ಇನ್ನು ಪ್ರಮುಖ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್, ‘ಟೇಕ್ ಎ ಬ್ರೇಕ್’ ಆಯ್ಕೆಯನ್ನು ಸದ್ಯದಲ್ಲೇ ಪರಿಚಯಿಸುವುದಾಗಿ ಹೇಳಿದೆ. ನಿರಂತರವಾಗಿ ಇನ್ಸ್ಟಾಗ್ರಾಮ್’ನಲ್ಲೇ ಕಾಲ ಕಳೆಯುವವರಿಗೆ ವಿರಾಮ ತೆಗೆದುಕೊಳ್ಳುವಂತೆ ಇನ್ಮುಂದೆ ಸ್ವತಃ ಇನ್ಸ್ಟಾಗ್ರಾಮ್ ನೆನಪಿಸಲಿದೆ. ಯೂಟ್ಯೂಬ್’ನಲ್ಲಿ ಈಗಾಗಲೇ ಈ ಆಯ್ಕೆ ಲಭ್ಯವಿದೆ. 10 ನಿಮಿಷ, 20 ನಿಮಿಷ ಅಥವಾ 30 ನಿಮಿಷಗಳಿಗೊಮ್ಮೆ ‘ಟೇಕ್ ಎ ಬ್ರೇಕ್’ ನೆನಪಿಸುವಂತೆ ಖಾತೆದಾರರು ಸೆಟ್ಟಿಂಗ್’ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.