ಊರಲ್ಲಿ ಹೀರೋ, ‘ವೃತ್ತಿ’ಯಲ್ಲಿ ಖತರ್ನಾಕ್..! ಪೈವಳಿಕೆ ಜಿಯಾ ಅರೆಸ್ಟ್

Prasthutha|

ಮುಂಬೈ: ಕುಖ್ಯಾತ ರೌಡಿ ಕಾಲಿಯಾ ರಫೀಕ್, ಡಾನ್ ತಸ್ಲೀಮ್ ಮತ್ತು ಬಾಲಿಕಾ ಅಜೀಜ್ ಸೇರಿದಂತೆ ನಾಲ್ಕು ಕೊಲೆಗಳಲ್ಲಿ ಆರೋಪಿಯಾಗಿದ್ದ ಕಾಸರಗೋಡು ಮೂಲದ ಜಿಯಾನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

- Advertisement -

ಕಾಲಿಯಾ ರಫೀಕ್ ಮತ್ತು ಡಾನ್ ತಸ್ಲೀಮ್ ವಿರುದ್ಧ ಕೊಲೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ಜಿಯಾ ವಿರುದ್ಧ ಪಿತೂರಿ ಆರೋಪ ಹೊರಿಸಿದ್ದರು. ಮಂಜೇಶ್ವರಂ ಪೊಲೀಸ್ ಠಾಣೆಯಲ್ಲೂ ಜಿಯಾ ವಿರುದ್ದ ಪ್ರಕರಣ ದಾಖಲಾಗಿತ್ತು.

ಆದರೆ ಮತ್ತೊಂದೆಡೆ ತನ್ನ ಊರಾದ ಕಾಸರಗೋಡಿನ ಪೈವಳಿಕೆಯಲ್ಲಿ ಜಿಯಾ ಪರೋಪಕಾರಿಯಾಗಿ ಸಾರ್ವಜನಿಕರೆಡೆಯಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.

- Advertisement -

ರವಿ ಪೂಜಾರಿ ನಟಿ ಲೀನಾ ಮರಿಯಾ ಪೌಲ್’ಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಸಂದರ್ಭದಲ್ಲಿ ನಟಿಯ ಬೆಂಬಲಕ್ಕೆ ನಿಂತಿದ್ದ ಜಿಯಾ ಹಣ ನೀಡದಂತೆ ತಡೆದಿದ್ದ.

ತನ್ನ ಊರಿನಿಂದ ಜಿಯಾ ಗುರುವಾರ ಬೆಳಗ್ಗೆ ವಿದೇಶಕ್ಕೆ ಮರಳಲು ಮುಂಬೈನ ಸಹಾರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮುಂಬೈ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಜಿಯಾ ಕುರಿತಾದ ಮಾಹಿತಿಯನ್ನು ಪೊಲೀಸರಿಗೆ ರವಿ ಪೂಜಾರಿ ನೀಡಿದ್ದ ಎನ್ನಲಾಗುತ್ತಿದ್ದರೂ, ರವಿ ಪೂಜಾರಿ ಹೇಳಿಕೆಯನ್ನು ತನಿಖಾ ತಂಡ ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ.

ಜಿಯಾನನ್ನು ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಕೊಚ್ಚಿ ಪೊಲೀಸರು ಮುಂಬೈಗೆ ತೆರಳಿದ್ದಾರೆ.

 ಈ ನಡುವೆ ಉದ್ಯಮಿ ಶಿವಿಂದರ್ ಸಿಂಗ್ ಪತ್ನಿಗೆ 200 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ನಟಿ  ಲೀನಾ ಮರಿಯಾ ಪೌಲ್’ರನ್ನು ಬಂಧಿಸಿದ್ದಾರೆ.

Join Whatsapp