ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಜಾರಿ ಬಿದ್ದು ಯುವಕ ಮೃತ್ಯು

Prasthutha|

ಕಾಸರಗೋಡು: ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ಮಂಜೇಶ್ವರದಲ್ಲಿ ನಡೆದಿದೆ.

- Advertisement -


ಮಂಜೇಶ್ವರ ಕರೋಡ ನಿವಾಸಿ ಫವಾಝ್ (21) ಮೃತ ಯುವಕ. ಮಂಜೇಶ್ವರ ಖಾಸಗಿ ಶಾಲೆಯ ಬಸ್ ನೌಕರನಾಗಿರುವ ಫವಾಝ್, ಹಾಗೂ ಇನ್ನೊಬ್ಬ ಯುವಕ ಶಾಲೆಯ ಕಟ್ಟಡ ಮೇಲೆ ಇರುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಮೇಲಕ್ಕೇರಿದ್ದರು. ಈ ಸಂದರ್ಭದಲ್ಲಿ ಫವಾಝ್ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.


ಕೂಡಲೇ ಶಾಲಾ ಸಿಬ್ಬಂದಿಗಳು, ನಾಗರಿಕರು ಫವಾಝ್’ನನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಸ್ಥಳಕ್ಕೆ ಧಾವಿಸಿದ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp