ಮಂಗಳೂರು | ಚಿನ್ನದ ಅಂಗಡಿಯಲ್ಲಿ ರಾಘವೇಂದ್ರ ಆಚಾರ್ಯ ಕೊಲೆ ಪ್ರಕರಣ: 7 ಪೊಲೀಸ್ ತಂಡಗಳ ರಚನೆ

Prasthutha|

ಮಂಗಳೂರು: ನಗರದ ಹಂಪನ ಕಟ್ಟೆಯ ಚಿನ್ನದ ಅಂಗಡಿಯಲ್ಲಿ ಸಿಬ್ಬಂದಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗಾಗಿ 7 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

- Advertisement -


ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರ್ಸ್’ನಲ್ಲಿ ಸಿಬ್ಬಂದಿಯಾಗಿದ್ದ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ಯ (55) ಅವರಿಗೆ ಶುಕ್ರವಾರ ಸಂಜೆ ಮುಸುಕುಧಾರಿಯೊಬ್ಬ ಚೂರಿಯಿಂದ ಇರಿದು ಹತ್ಯೆ ಮಾಡಿ, ಅನಂತರ ಸ್ವಲ್ಪ ದೂರಕ್ಕೆ ಓಡಿ ಹೋಗಿ ಆಟೋರಿಕ್ಷಾವೊಂದರಲ್ಲಿ ಹೋಗಿದ್ದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.


ಆರೋಪಿಯ ಚಹರೆಯ ಸಿಸಿಟಿವಿ ದಾಖಲೆಯನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಆರೋಪಿ ಪತ್ತೆ ಕಾರ್ಯವು ಜಟಿಲವಾದ ಕಾರಣ ನಗರದ ಅಪರಾಧ ಪತ್ತೆ ದಳ (ಸಿಸಿಬಿ), ದಕ್ಷಿಣ ಉಪ ವಿಭಾಗ, ಉತ್ತರ ಉಪವಿಭಾಗ, ಕೇಂದ್ರ ಉಪವಿಭಾಗ ಸಹಿತ 7 ತಂಡಗಳನ್ನು ರಚಿಸಲಾಗಿದೆ.

- Advertisement -


ಮಾತ್ರವಲ್ಲ ಸಿಸಿಟಿವಿಯಲ್ಲಿ ದಾಖಲಾದ ಆರೋಪಿಯ ಭಾವಚಿತ್ರವನ್ನು ಬಿಡುಗಡೆ ಮಾಡಿ ಆತನ ಬಂಧನಕ್ಕೆ ಸಾರ್ವಜನಿಕರ ನೆರವನ್ನು ಪೊಲೀಸರು ಕೋರಿದ್ದಾರೆ.

Join Whatsapp