ಉಡುಪಿ | ರಸ್ತೆಗೆ ಗಾಂಧಿ ಹಂತಕ ಗೋಡ್ಸೆ ಹೆಸರು: ಫಲಕ ಒಡೆದು ಹಾಕಿದ ಯುವ ಕಾಂಗ್ರೆಸ್ ಕಾರ್ಯಕರ್ತರು

Prasthutha|

ಉಡುಪಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಕೊಂದ, ದೇಶದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಹೆಸರನ್ನು ಕಾರ್ಕಳದ ಬೋಳ ಗ್ರಾಮ ಪಂಚಾಯತ್ ರಸ್ತೆಗೆ ನಾಮಕರಣ ಮಾಡಿದ್ದು, ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ನಾಮಫಲಕವನ್ನು ಅಲ್ಲಿಂದ ತೆರವುಗೊಳಿಸಿ ಒಡೆದುಹಾಕಿದ್ದಾರೆ.

- Advertisement -


ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೋಳ ಗ್ರಾಮ ಪಂಚಾಯತ್ ರಸ್ತೆಗೆ ಗಾಂಧಿ ಹಂತಕನ ಹೆಸರು ಇಡುವ ಮೂಲಕ ದೇಶದ ನಾಗರೀಕರು ತಲೆ ತಗ್ಗಿಸುವ ಕೆಲಸವನ್ನು ಮಾಡಿದ್ದು, ಈ ನಾಮಫಲಕವನ್ನು ತೆರವುಗೊಳಿಸಲು ಹೋರಾಟವನ್ನು ನಡೆಸುತ್ತೇವೆ. ನಮ್ಮನ್ನು ಜೈಲಿಗೆ ಹಾಕಿದರೂ ಚಿಂತೆಯಿಲ್ಲ ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ನಯನ್ ಆಚಾರ್ಯ ಕಿಡಿಕಾರಿದ್ದಾರೆ.
ಗೋಡ್ಸೆ ನಾಮಫಲಕ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶವ್ಯಕ್ತವಾಗಿದೆ.



Join Whatsapp