ಕೌಟುಂಬಿಕ ಕಲಹ: ಕೆರೆಗೆ ಹಾರಿದ ಮೂವರು ಮಹಿಳೆಯರು, ಒಬ್ಬರ ಸಾವು

Prasthutha|

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೂವರು ಮಹಿಳೆಯರು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರಲ್ಲಿ ಒಬ್ಬರು ಮೃತಪಟ್ಟ ದಾರುಣ ಘಟನೆ ಮಾಗಡಿಯಲ್ಲಿ ನಡೆದಿದೆ.

- Advertisement -

ಮಾಗಡಿಯ ಗೌರಮ್ಮನ ಕೆರೆಗೆ ಮೂವರು ಮಹಿಳೆಯರು ಹಾರಿದ್ದು, ಅವರಲ್ಲಿ ಶಾಂತಾ ಬಾಯಿ (50) ಮೃತಪಟ್ಟಿದ್ದಾರೆ. ಇನ್ನಿಬ್ಬರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ.

ಮೃತ ಶಾಂತಾ ಸೇರಿ ಮೂವರು ಮಾಗಡಿ ಟೌನ್ ನ ನೇಯಿಗೆ ಬೀದಿ ನಿವಾಸಿಯಾಗಿದ್ದಾರೆ. ನಿನ್ನೆ ಮೂವರು ಕೆರೆಗೆ ಹಾರಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಉಷಾ ಬಾಯಿ ಹಾಗೂ ನಿರ್ಮಲಾಬಾಯಿಯನ್ನು ರಕ್ಷಣೆ ಮಾಡಿದ್ದು, ಶಾಂತಾಬಾಯಿ ಮೃತಪಟ್ಟಿದ್ದಾರೆ.

- Advertisement -

ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಮಾಡಿದ್ದು, ಇವರು ಒಂದೇ ಕುಟುಂಬದ ಮಹಿಳೆಯರು ಎಂಬುದು ತಿಳಿದುಬಂದಿದೆ. ಕೌಟುಂಬಿಕ ಕಲಹದಿಂದ ಇವರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಮಾಗಡಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp