ರೀಲ್ಸ್ ಮಾಡುತ್ತಿದ್ದ ಯುವಕನ ಅಪಹರಣ, ಬೆತ್ತಲೆ ಮಾಡಿ ಹಲ್ಲೆ: ಐವರು ವಶಕ್ಕೆ

Prasthutha|

ಹುಬ್ಬಳ್ಳಿ: ಇನ್ ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಿದ್ದ ಯುವಕನನ್ನು ಅಪಹರಿಸಿ ಬೆತ್ತಲೆಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

- Advertisement -


ಧಾರವಾಡದ ನಿವಾಸಿ ಸಂದೀಪ್ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವಕ.


ಈ ಬಗ್ಗೆ ಮಾಹಿತಿ ನೀಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಸಂತೋಷ್ ಬಾಬು, ಎರಡು ವಿಡಿಯೋ ಮೂಲಕ ವಿಷಯ ನಮ್ಮ ಗಮನಕ್ಕೆ ಬಂದಿದೆ. ಆರೋಪಿ ಪ್ರಜ್ವಲ್ ತಾಯಿಗೆ ರೀಲ್ಸ್ ಮೂಲಕ ಸಂದೀಪ್ ಬೈದಿದ್ದ. ಇನ್ ಸ್ಟಾಗ್ರಾಂ ರೀಲ್ಸ್ನಲ್ಲಿ ಅತ್ಯಂತ ಕೆಟ್ಟದಾಗಿ ಬೈತಿದ್ದನು. ಮೂರ್ನಾಲ್ಕು ತಿಂಗಳ ಹಿಂದಿನ ಘಟನೆ ಇದಾಗಿದ್ದು, ಈವರೆಗೆ ಸಂದೀಪ್ ದೂರು ಕೊಟ್ಟಿಲ್ಲ. ಅಲ್ಲದೆ, ಹುಬ್ಬಳ್ಳಿಯ ಸೆಟ್ಲಮೆಂಟ್ ನಲ್ಲಿ ನಡೆದ ಘಟನೆ ಎಂಬ ಅನುಮಾನ ಇದೆ ಎಂದರು.

- Advertisement -

ಹಲ್ಲೆ ಪ್ರಕರಣ ಸಂಬಂಧ ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್, ಮಂಜು ಎಂಬವರನ್ನು ವಶಕ್ಕೆ ಪಡೆದ ಹುಬ್ಬಳ್ಳಿ ಶಹರ ಠಾಣಾ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರೀಲ್ಸ್ ಮಾಡಿದ್ದ ಸಂದೀಪ್ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದರು.