ಕಾಟಿಪಳ್ಳ – ಸೂರಿಂಜೆ ಮುಖ್ಯ ರಸ್ತೆ ದುರಾವಸ್ಥೆ: ಸಾರ್ವಜನಿಕರ ಪರದಾಟ

Prasthutha|

ಮಂಗಳೂರು: ಕಾಟಿಪಳ್ಳ- ಸೂರಿಂಜೆ ಬಳಿಯ ಈದ್ಗಾ ಮೈದಾನದ ರಸ್ತೆಗಳು ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಗುಂಡಿಗಳು ಬಿದ್ದು ಶಾಲೆ , ಕಾಲೇಜು , ಕಛೇರಿಗಳಿಗೆ ತೆರಳುವವರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ.

- Advertisement -

ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಂತೂ ಇಲ್ಲಿನ ಅವಸ್ಥೆ ಹೇಳತೀರದು. ಪ್ರತೀ ದಿನ ನೂರಾರು ವಾಹನಗಳು, ಶಾಲಾ ವಿದ್ಯಾರ್ಥಿಗಳು, ನಗರಕ್ಕೆ ಉದ್ಯೋಗ ಮತ್ತು ಅನ್ಯ ಕೆಲಸಗಳಿಗೆ, ಆಸ್ಪತ್ರೆಗೆ ತೆರಳುವ ಮಂದಿ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ಪ್ರತೀ ವರ್ಷವೂ ಕೇವಲ ತೇಪೆ ಹಚ್ಚುವ ಕೆಲಸ ಮಾತ್ರ ಆಗುತ್ತದೆ  ಎಂದು ಸಾರ್ವಜನಿಕರು ದೂರಿದ್ದಾರೆ.

ಜನ ಪ್ರತಿನಿಧಿಗಳು ಕೂಡಲೇ ಇತ್ತ ಗಮನ ಹರಿಸಿ ಶಾಶ್ವತ ಪರಿಹಾರವನ್ನು ಮಾಡಬೇಕಾಗಿದೆ ಎಂದು ಸ್ಥಳೀಯರಾದ ಎಸ್ಡಿಪಿಐ ಕಾಟಿಪಳ್ಳ ವಾರ್ಡ್ ಅಧ್ಯಕ್ಷರಾದ ಫಯಾಝ್ ಸುಲ್ತಾನ್ ಹೇಳಿದ್ದಾರೆ.