ಲಕ್ನೋ: ಹಾವು ಹಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನೂ ಹಾವು ಕಡಿತಕ್ಕೆ ಬಲಿಯಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಭವಾನಿಪುರ ಎಂಬಲ್ಲಿ ನಡೆದಿದೆ.
ಉತ್ತರ ಪ್ರದೇಶದ ಭವಾನಿಪುರದ ಅರವಿಂದ ಮಿಶ್ರಾ (36) ಹಾವು ಕಚ್ಚಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗೆಂದು ಹಳ್ಳಿಗೆ ಬಂದ ತಮ್ಮ 22 ವರ್ಷದ ಗೋವಿಂದ ಮಿಶ್ರಾನನ್ನು ಬೇರೊಂದು ಹಾವು ಕಡಿದುದರಿಂದ ಆತನೂ ಸಾವಿಗೀಡಾಗಿದ್ದಾನೆ.
ಆತ ಅಣ್ಣನ ಅಂತ್ಯಕ್ರಿಯೆ ಮುಗಿಸಿ ಮಲಗಿದ್ದಾಗಲೆ ಹಾವು ಗೋವಿಂದ ಮಿಶ್ರಾಗೂ ಕಚ್ಚಿ ವಿಷವೇರಿಸಿದೆ. ಗೋವಿಂದ ಮಿಶ್ರಾನ ಕುಟುಂಬಕ್ಕೆ ಸೇರಿದ ಚಂದ್ರಶೇಖರ ಪಾಂಡೆ ಎಂಬಾತನನ್ನು ಸಹ ಆ ವಿಷದ ಹಾವು ಕಚ್ಚಿದೆ ಎಂದು ಸ್ಥಳೀಯ ಸರ್ಕಲ್ ಆಫೀಸರ್ ರಾಧಾ ರಮಣ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪಾಂಡೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಎರಡನೆಯ ಕಡಿತವಾದುದರಿಂದ ಚಂದ್ರಶೇಖರ್ ಮೇಲೆ ವಿಷದ ಪ್ರಭಾವ ಗೋವಿಂದನಿಗಿಂತ ಕಡಿಮೆ ಇತ್ತು. ಮೊದಲು ಅಣ್ಣ ಮರುದಿನ ತಮ್ಮ ಹಾವಿನ ಕಡಿತಕ್ಕೆ ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದರು.