1,600 ತಳಿಯ ಮಾವು ಬೆಳೆದ ಪದ್ಮಶ್ರೀ ಕಲೀಮುಲ್ಲಾ ಖಾನ್

Prasthutha|

ಮೋದಿ, ಶಾ, ತೆಂಡೂಲ್ಕರ್ ಹೆಸರಲ್ಲಿ ಮಾವು

- Advertisement -

ಲಕ್ನೋ: ಭಾರತದ ಮ್ಯಾಂಗೋ ಮ್ಯಾನ್ ಎಂದೇ ಖ್ಯಾತಿ ಆಗಿರುವ ಹಾಜಿ ಕಲೀಮುಲ್ಲಾ ಖಾನ್ ತಮ್ಮ ತೋಟದಲ್ಲಿ 1,600 ತಳಿಯ ಮಾವಿನ ಹಣ್ಣಿನ ಮರಗಳನ್ನು ಬೆಳೆಸುತ್ತಿದ್ದಾರೆ.

82 ವಯಸ್ಸಿನ ಹಾಜಿ ಕಲೀಮುಲ್ಲಾ ಖಾನ್ ಅವರು ಬಾಲ್ಯದಿಂದ ಮಾವಿನ ಹಣ್ಣನ್ನು ಬೆಳೆಸಲು ಪ್ರಾರಂಭಿಸಿ ಇದೀಗ ಉತ್ತರ ಪ್ರದೇಶದಲ್ಲಿರುವ ತಮ್ಮ ತೋಟದಲ್ಲಿ 1,600 ತಳಿಯ ಮಾವಿನ ಹಣ್ಣಿನ ಮರವನ್ನು ಬೆಳೆಸುತ್ತಿದ್ದಾರೆ.

- Advertisement -

ಹಾಜಿ ಕಲೀಮುಲ್ಲಾ ಖಾನ್ ಅವರು 7ನೇ ತರಗತಿಯಲ್ಲಿದ್ದಾಗ ಮೊದಲು ಮಾವಿನ ಮರವನ್ನು ನೆಟ್ಟಿರುವುದಾಗಿ ತಿಳಿಸಿದ್ದಾರೆ. ನಂತರ ಒಂದೇ ಮರದಿಂದ ಏಳು ವಿಧದ ಹಣ್ಣುಗಳನ್ನು ಬೆಳೆಸುವ ಕಸಿ ವಿಧಾನವನ್ನು ಕಲಿತುಕೊಂಡರು. ಇಂದು ಅವರ ಜಮೀನಿನಲ್ಲಿ 120 ವರ್ಷ ಹಳೆಯ ಮಾವಿನ ಮರವಿದ್ದು, ವಿವಿಧ ರುಚಿ, ಬಣ್ಣ, ವಿನ್ಯಾಸ ಮತ್ತು ಪರಿಮಳ 30 ಬಗೆಯ ಮಾವಿನ ಹಣ್ಣುಗಳಿವೆ. ವಿಶೇಷವೆಂದರೆ, ಇವರು ಬೆಳೆಸಿರುವ ಮಾವಿನ ಹಣ್ಣುಗಳಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟಿ ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಗಣ್ಯ ವ್ಯಕ್ತಿಗಳ ಹೆಸರಿಟ್ಟಿದ್ದಾರೆ. 

ಮಾವಿನ ತಳಿಗಳನ್ನು ಸಂರಕ್ಷಿಸಲು ಮತ್ತು ವಿಸ್ತರಿಸಿದಕ್ಕಾಗಿ 2008ರಲ್ಲಿ ಹಾಜಿ ಕಲೀಮುಲ್ಲಾ ಖಾನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.

Join Whatsapp