ಯುವತಿ ಸಾಮೂಹಿಕ ಅತ್ಯಾಚಾರ: ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಡಿಎಸ್ಪಿ

Prasthutha|

ರಾಂಚಿ(ಜಾರ್ಖಂಡ್): ಐವರು ದುಷ್ಕರ್ಮಿಗಳು ಯುವತಿಯೊಬ್ಬಳ ಮೇಲೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಇಲ್ಲಿನ ರಾತು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

ಕೃತ್ಯ ನಡೆಸಿದ ಐವರು ದುಷ್ಕರ್ಮಿಗಳನ್ನು ರೆಡ್ ಹ್ಯಾಂಡ್ ಆಗಿ  ಪೊಲೀಸರು ಬಂಧಿಸಿದ್ದಾರೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯು ನಿನ್ನೆ ರಾತ್ರಿ ಮನೆಗೆ ಮರಳುತ್ತಿದ್ದಾಗ ಕಾರಿನಲ್ಲಿ ಬಂದ ಕೆಲವರು ನನ್ನನ್ನು ಬಲವಂತವಾಗಿ ಎಳೆದೊಯ್ದರು. ಬಳಿಕ ರೆಸ್ಟೋರೆಂಟ್ ವೊಂದರ ಹೊರಗೆ ಕಾರು ನಿಲ್ಲಿಸಿ ಅತ್ಯಾಚಾರ ಎಸಗಿದರು ಎಂದು ಹೇಳಿಕೆ ನೀಡಿದ್ದಾರೆ.

- Advertisement -

ರಾತ್ರಿ ಗಸ್ತಿನಲ್ಲಿದ್ದ ಡಿಎಸ್ ಪಿ ಅಂಕಿತಾ ಅವರು ರೆಸ್ಟೋರೆಂಟ್ ನ ಹೊರಗೆ ಕಾರೊಂದು ನಿಂತಿರುವುದನ್ನು ಗಮನಿಸಿದ್ದು, ಅನುಮಾನ ಮೂಡಿದೆ. ಕಾರು ಪರಿಶೀಲಿಸಿದಾಗ ಒಳಗೆ ಐವರು ಯುವಕರ ಮಧ್ಯೆ ಕುಳಿತಿದ್ದ ಯುವತಿ ರೋದಿಸುತ್ತಿದ್ದಳು. ವಿಷಯ ಅರ್ಥೈಸಿಕೊಂಡ ಡಿಎಸ್ಪಿ, ಸಮೀಪದ ಧುರ್ವಾ ಠಾಣೆಯ ಪ್ರಭಾರಿ ಪ್ರವೀಣ್ ಜಾ ಅವರನ್ನು ಸ್ಥಳಕ್ಕೆ ಬರುವಂತೆ ಹೇಳಿ ತಕ್ಷಣವೇ ಪೊಲೀಸ್ ಪಡೆಯನ್ನೂ ಕಳುಹಿಸುವಂತೆ ಸೂಚಿಸಿದ್ದಾರೆ.

ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಿ ರಾತು ಪೊಲೀಸ್ ಠಾಣೆಗೆ ಕರೆದೊಯ್ದರು. ಡಿಎಸ್ಪಿ ಹೇಳುವ ಪ್ರಕಾರ, ಘಟನಾ ಸ್ಥಳವು ಧುರ್ವಾ ಪೊಲೀಸ್ ಠಾಣೆಗೆ ಸಮೀಪದಲ್ಲಿದೆ. ಆದ್ದರಿಂದ ಧುರ್ವಾ ಪೊಲೀಸ್ ಠಾಣೆಯಿಂದ ಪಡೆಯನ್ನು ಕರೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಪೊಲೀಸ್ ವಿಚಾರಣೆಯಲ್ಲಿ ಬಂಧಿತ ಎಲ್ಲಾ ಆರೋಪಿಗಳು ಕೃತ್ಯ ಒಪ್ಪಿಕೊಂಡಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರು ಹೊರ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೆಲವರು ಎರಡು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಯುವತಿ ರಸ್ತೆಯಲ್ಲಿ ಒಬ್ಬಳೇ ಹೋಗುತ್ತಿದ್ದಳು. ಆಕೆಗೆ ದಾರಿ ಕೇಳುವ ನೆಪದಲ್ಲಿ ಆರೋಪಿಗಳು ಕಾರಿನೊಳಗೆ ಎಳೆದೊಯ್ದಿದ್ದಾರೆ. ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

Join Whatsapp