ಪ್ರಿಯಕರನ ಪರೀಕ್ಷೆ ಬರೆದು ಸಿಕ್ಕಿಬಿದ್ದ ಯುವತಿ

Prasthutha|

ಗಾಂಧಿನಗರ: ಪ್ರಿಯಕರನ ಬದಲಿಗೆ ಗೆಳತಿಯೇ ಪರೀಕ್ಷೆ ಬರೆದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದ ವೀರ್ ನರ್ಮದ್ ನ ವಿಎನ್‌ಎಸ್‌ಜಿಯು ಕಾಲೇಜಿ ನಲ್ಲಿ ನಡೆದಿದೆ.

- Advertisement -


ಉತ್ತರಾಖಂಡಕ್ಕೆ ವಿಹಾರಕ್ಕೆ ಹೋಗಿದ್ದ ತನ್ನ ಗೆಳೆಯನಿಗೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆತನ ಪರವಾಗಿ ಮೂರನೇ ವರ್ಷದ ಬಿಕಾಂ ಪರೀಕ್ಷೆಯಲ್ಲಿ ಡಮ್ಮಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದಾಳೆ.


ಗೆಳೆಯನ ಪರವಾಗಿ ಪರೀಕ್ಷೆ ಬರೆದಿರುವ ಯುವತಿ ಮುಂದಿನ ಮೂರು ವರ್ಷಗಳ ಪರೀಕ್ಷೆಗಳಿಂದ ಡಿಬಾರ್ ಆಗುವ ಸಾಧ್ಯತೆಯಿದ್ದು, ಆ ಮೂಲಕ ಗೆಳೆಯನಿಗೆ ಸಹಾಯ ಮಾಡಲು ಹೋದ ಯುವತಿ ಇದೀಗ ತನ್ನ ಪದವಿಯನ್ನೇ ಕಳೆದುಕೊಳ್ಳುವ ಅಪಾಯವನ್ನು ಎದುರಿಸುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ FACT ಸಮಿತಿಯ ಸಂಚಾಲಕ ಸ್ನೇಹಲ್ ಜೋಶಿ “ಸಾಮಾನ್ಯವಾಗಿ ಡಮ್ಮಿ ಅಭ್ಯರ್ಥಿಗೆ ಕಠಿಣ ಶಿಕ್ಷೆ ಎಂದರೆ ಅವರ ಸ್ವಂತ ಪದವಿಯನ್ನು ರದ್ದುಗೊಳಿಸುವುದೇ ಆಗಿದೆ. ಈ ಗರಿಷ್ಠ ಶಿಕ್ಷೆಯನ್ನು ನೀಡಿದರೆ, ನಿಜವಾದ ವಿದ್ಯಾರ್ಥಿಯ ಹಿಂದಿನ ಫಲಿತಾಂಶಗಳನ್ನು ಮತ್ತು ಮುಂದಿನ ಮೂರು ವರ್ಷಗಳವರೆಗೆ ಪರೀಕ್ಷೆಯನ್ನು ತೆಗೆದುಕೊಳ್ಳದಂತೆ ಡಿಬಾರ್ ಮಾಡಬಹುದು,”ಎಂದು ತಿಳಿಸಿದ್ದಾರೆ.
ಪ್ರೀತಿ ವ್ಯಾಮೋಹದಿಂದ ಪಾಗಲ್ ಪ್ರೇಮಿಗಳಿಬ್ಬರೂ ತಮ್ಮ ಪರೀಕ್ಷೆಗಳನ್ನು ಕಳೆದುಕೊಳ್ಳುವಂತಾಗಿದೆ.

Join Whatsapp