2028ರ ಕುಂಭಮೇಳ: ಉಜ್ಜಯಿನಿ ಕಾಲೋನಿಯ ಮುಸ್ಲಿಮರ ಮನೆ ಖಾಲಿ ಮಾಡುವಂತೆ ತಾಕೀತು

Prasthutha|

ಭೋಪಾಲ್: 2028 ರಲ್ಲಿ ನಡೆಯುವ ಕುಂಭಮೇಳಕ್ಕಾಗಿ ಉಜ್ಜಯಿನಿ ಮುಸ್ಲಿಂ ಕಾಲೋನಿ ನಿವಾಸಿಗಳಿಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಜಿಲ್ಲಾಡಳಿತವು ಆದೇಶ ನೀಡಿದೆ.

- Advertisement -

2028ರ ಕುಂಭಮೇಳವು ನಗರದಲ್ಲಿ ನಡೆಯಲಿರುವುದರಿಂದ, ಈಗಿಂದಲೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಿವೆ. ಅದಕ್ಕಾಗಿ ಉಜ್ಜಯಿನಿಯ ಶಿಪ್ರಾ ನದಿಯ ದಡದಲ್ಲಿರುವ ಗುಲ್ ಮೊಹರ್ ಮುಸ್ಲಿಂ ಕಾಲೋನಿಯ ನಿವಾಸಿಗಳಿಗೆ ತಮ್ಮ ಮನೆಗಳನ್ನು ತಕ್ಷಣವೇ ಖಾಲಿ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ.

ಕಳೆದ 80 ವರ್ಷಗಳಿಂದ ಕಾಲೋನಿಯಲ್ಲಿ  ವಾಸಿಸುತ್ತಿದ್ದೇವೆ. ಜಮೀನು ಮತ್ತು ಮನೆಗಳಿಗೆ ಸಂಬಂಧಿಸಿದ ದಾಖಲೆಗಳು ಸಹ ನಮ್ಮ ಬಳಿ ಇವೆ. ಆದರೂ ಆಗಾಗ ನಮಗೆ ನೋಟಿಸ್ ಕಳುಹಿಸಿ ತೊದರೆ ನೀಡುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.

- Advertisement -

ಅಲ್ಲದೆ ಆಡಳಿತವು ಜನರಿಗೆ ಯಾವುದೇ ಪುನರ್ವಸತಿ ಯೋಜನೆಯನ್ನು ನೀಡದೆ ಅವರಿಗೆ ಏಕಪಕ್ಷೀಯವಾಗಿ ನೋಟಿಸ್ ನೀಡಿದೆ ಎಂದು ಅವರು ದೂರಿದ್ದಾರೆ.

“ನಾವು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಭೂಮಿಯನ್ನು ಖರೀದಿಸಿದ್ದೇವೆ. ಕೆಲವರು ಬ್ಯಾಂಕ್ ಸಾಲಗಳನ್ನು ಕಟ್ಟುತ್ತಿದ್ದಾರೆ. ಈಗ ಈ ಪ್ರದೇಶವನ್ನು ಖಾಲಿ ಮಾಡುವಂತೆ ನಮ್ಮನ್ನು ಕೇಳಲಾಗುತ್ತಿದೆ. ನಾವು ಎಲ್ಲಿಗೆ ಹೋಗಬೇಕು? ಎಂದು ಗುಲ್ ಮೊಹರ್ ಕಾಲೋನಿಯ ನಿವಾಸಿ ಶಕೀಲ್ ನಿಮ್ಮ ರೆಹಮಾನ್ ಪ್ರಶ್ನಿಸಿದ್ದಾರೆ.

 ಇದು ಮುಸ್ಲಿಮರ ವಿರುದ್ಧದ ಕ್ರೌರ್ಯ ಮತ್ತು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜಮೀಯತ್ ಉಲಮಾ ಮಧ್ಯಪ್ರದೇಶದ ಅಧ್ಯಕ್ಷ ಹಾಜಿ ಮುಹಮ್ಮದ್ ಹಾರೂನ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾನವೀಯ ನೆಲೆಗಟ್ಟಿನಲ್ಲಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಮತ್ತು ಈ ಕ್ರೌರ್ಯ, ಅಧಿಕಾರ ದುರುಪಯೋಗದಿಂದ ಜನರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

Join Whatsapp