ಲಿವ್ ಇನ್ ರಿಲೇಶನ್ ಶಿಪ್’ನಲ್ಲಿದ್ದ ಪ್ರೇಯಸಿಯನ್ನು ಕೊಲೆ ಮಾಡಿದ ಯುವಕ

Prasthutha|

ಬೆಂಗಳೂರು: ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಪ್ರೇಮಿಗಳ ನಡುವೆ ಜಗಳವಾಗಿ ಪ್ರೇಯಸಿಯನ್ನು ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.


ಇಬ್ಬರೂ ನೇಪಾಳ ಮೂಲದವರಾಗಿದ್ದು ಕೃಷ್ಣಕುಮಾರಿ (23)ಯನ್ನು ಸಂತೋಷ್ ದಾಮಿ (27)ಕೊಲೆಗೈದ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

- Advertisement -


ಹೊರಮಾವು ಯೂನಿಸೆಕ್ಸ್ ಸ್ಪಾ ದಲ್ಲಿ ಬ್ಯೂಟಿಷಿಯನ್ ಆಗಿದ್ದ ಕೃಷ್ಣಕುಮಾರಿ ಟಿಸಿಪಾಳ್ಯದಲ್ಲಿ ಬಾರ್ಬರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ದಾಮಿ ಇಬ್ಬರಿಗೂ ಪರಿಚಯವಾಗಿ ಪ್ರೇಮಾಂಕುರವಾಗಿ ರಾಮೂರ್ತಿನಗರದ ಟಿಸಿಪಾಳ್ಯದಲ್ಲಿ ಒಂದೇ ರೂಂ ಬಾಡಿಗೆ ಪಡೆದು ಸಹಜೀವನ ( ಲಿವಿಂಗ್ ರಿಲೇಷನ್ ಶಿಪ್) ನಡೆಸುತ್ತಿದ್ದರು.


ಮನೆಯಲ್ಲಿ ಇಂದು ಬೆಳಿಗ್ಗೆ ಇಬ್ಬರ ನಡುವೆ ಜಗಳವಾಗಿ ವಿಕೋಪಕ್ಕೆ ತಿರುಗಿದಾಗ ಕೃಷ್ಣಕುಮಾರಿಯನ್ನು ಕೊಲೆ ಮಾಡಲಾಗಿದೆ.
ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಮೂರ್ತಿನಗರ ಪೊಲೀಸರು, ‘ಇಬ್ಬರು ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಮಾಹಿತಿ ಗೊತ್ತಾಗಿದೆ. ಎರಡು ವರ್ಷಗಳಿಂದ ಸಂತೋಷ್ ಜೊತೆ ಒಂದೇ ಮನೆಯಲ್ಲಿ ಇದ್ದು ಬೇರೆಯವರ ಜೊತೆ ಸಂಬಂಧ ಇಟ್ಡುಕೊಂಡಿದ್ದ ವಿಚಾರವಾಗಿ ಜಗಳವಾಗಿದೆ. ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದರು.

- Advertisement -