ಕೊಝಿಕ್ಕೋಡ್: ಯುವ ವೈದ್ಯೆಯೊಬ್ಬರ ಮೃತದೇಹ ಫ್ಲ್ಯಾಟ್’ನಲ್ಲಿ ಪತ್ತೆಯಾದ ಘಟನೆ ಕೋಝಿಕ್ಕೋಡ್’ನ ಪಲಹಿಯಲ್ಲಿ ನಡೆದಿದೆ.
ಕೋಝಿಕ್ಕೋಡ್’ನ ಮಲಬಾರ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ ತನ್ಸಿಯಾ (25) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ತನ್ಸಿಯಾ ವಯನಾಡಿನ ಕಣಿಯಂಪಟ್ಟದ ನಿವಾಸಿ ಎಂದು ತಿಳಿದು ಬಂದಿದೆ.
ತನ್ಸಿಯಾ ಮಾ.1ರಂದು ತಮ್ಮ ಸ್ನೇಹಿತೆಯ ಫ್ಲಾಟ್’ಗೆ ಆಗಮಿಸಿದ್ದರು. ಆದರೆ ಬೆಳಗ್ಗೆ ಅವರು ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಆಕೆಯ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಕೊಠಡಿ ತೆರೆದು ನೋಡಿದಾಗ ತನ್ಸಿಯಾ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ತನ್ಸಿಯಾಗೆ ಇತ್ತೀಚೆಗಷ್ಟೇ ಫರೀತ್ ಎಂಬ ಯುವಕನೊಂದಿಗೆ ಮದುವೆಯಾಗಿತ್ತು. ಮೃತದೇಹವನ್ನು ಪೊಲೀಸರು ಕೊಝಿಕ್ಕೋಡ್ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ರವಾನಿಸಿದ್ದಾರೆ.