ನಾಗಲ್ಯಾಂಡ್‌ ನಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆ!

Prasthutha|

ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ 60 ವರ್ಷಗಳ ಬಳಿಕ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಿತ್ರ ಪಕ್ಷ ಎನ್ಡಿಪಿಪಿಯ ಹೆಕಾನಿ ಜಖಾಲು ಅವರು ದಿಮಾಪುರ್-3 ಸ್ಥಾನದಿಂದ ಗೆದ್ದಿದ್ದಾರೆ. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಒಟ್ಟು 183 ಅಭ್ಯರ್ಥಿಗಳಲ್ಲಿ ನಾಲ್ವರು ಮಹಿಳೆಯರಲ್ಲಿ 48 ವರ್ಷದ ವಕೀಲೆ-ಕಾರ್ಯಕರ್ತೆ ಕೂಡ ಒಬ್ಬರು. ಶ್ರೀಮತಿ ಜಖಾಲು ಅವರು ಲೋಕ ಜನಶಕ್ತಿ ಪಕ್ಷದ ಅಝೆಟೊ ಝಿಮೊಮಿ ಅವರನ್ನು ಸೋಲಿಸಿದ್ದಾರೆ.

- Advertisement -

ಆಡಳಿತಾರೂಢ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್ಡಿಪಿಪಿ) ಯನ್ನು ಪ್ರತಿನಿಧಿಸುತ್ತಿರುವ ಅವರು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಹಾಲಿ ಶಾಸಕ ಅಝೆಟೊ ಝಿಮೊಮಿ ಅವರನ್ನು 1,536 ಮತಗಳಿಂದ ಸೋಲಿಸಿ ದಿಮಾಪುರ್ -3 ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

“ಇದು ನನ್ನ ತಂಡ ಮತ್ತು ನನ್ನ ಕ್ಷೇತ್ರದ ಗೆಲುವು. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಜನರಿಗೆ ನಾನು ಆಭಾರಿಯಾಗಿದ್ದೇನೆ” ಎಂದು ನಾಗಾಲ್ಯಾಂಡ್ ನ ವಾಣಿಜ್ಯ ಕೇಂದ್ರವಾದ ದಿಮಾಪುರ್ನಿಂದ ಶ್ರೀಮತಿ ಜಖಾಲು ಹೇಳಿದರು.
ಯುಎಸ್ ಶಿಕ್ಷಣ ಪಡೆದ ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಜಖಾಲು ಅವರು ಯುವಕರು ಮತ್ತು ಮಹಿಳೆಯರ ಸಬಲೀಕರಣದ ಮೂಲಕ ರಾಜ್ಯವನ್ನು ಪರಿವರ್ತಿಸಲು ಸ್ಥಾಪಿಸಿದ ಯೂತ್ ನೆಟ್ ಎಂಬ ಸಂಸ್ಥೆಯ ಮೂಲಕ 17 ವರ್ಷಗಳ ಸಮಾಜ ಸೇವೆಯಿಂದಾಗಿ ಗೆಲ್ಲಲು ಕಾರಣ ಎಂದು ಹೇಳಿದರು.

Join Whatsapp