ಕ್ಯಾನ್ಸರ್ ಗೆ ಯುವ ನಟ ಬಲಿ

Prasthutha|

ಅಸ್ಸಾಂ: ಜನಪ್ರಿಯ ಅಸ್ಸಾಮಿ ನಟ ಕಿಶೋರ್ ದಾಸ್ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.

- Advertisement -


300 ಕ್ಕೂ ಹೆಚ್ಚು ಮ್ಯೂಸಿಕ್ ವೀಡಿಯೋ ಗಳಲ್ಲಿ ನಟಿಸಿರುವ 30 ವರ್ಷ ಪ್ರಾಯದ ನಟ ಕಿಶೋರ್ ದಾಸ್, ಈ ವರ್ಷದ ಮಾರ್ಚ್ ನಿಂದ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈನ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.


ಕಿಶೋರ್ ಸಾವಿನ ಸಮಯದಲ್ಲಿ ಕೋವಿಡ್ -19 ಸೋಂಕಿಗೂ ತುತ್ತಾಗಿದ್ದರು. ಕೋವಿಡ್ ವೈರಸ್ ಸಾಂಕ್ರಾಮಿಕ ಪ್ರೋಟೋಕಾಲ್ ಗಳ ಕಾರಣದಿಂದ ಅವರ ಪಾರ್ಥಿವ ಶರೀರವನ್ನು ಅವರ ತವರು ಮಿರ್ಜಾಗೆ ತರಲು ಸಾಧ್ಯವಾಗಿಲ್ಲ. ಹೀಗಾಗಿ ನಟನ ಅಂತಿಮ ವಿಧಿಗಳನ್ನು ಶನಿವಾರ ಸಂಜೆ ಚೆನ್ನೈನಲ್ಲಿ ನಡೆಸಲಾಯಿತು.

- Advertisement -


“ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಿಶೋರ್ ದಾಸ್ ದೇಹವನ್ನು ಅಸ್ಸಾಂಗೆ ಕಳುಹಿಸಲು ವ್ಯವಸ್ಥೆ ಮಾಡಲು ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿದರು ಆದರೆ ಕೋವಿಡ್ -19 ನಿರ್ಬಂಧಗಳಿಂದಾಗಿ ಅದು ಸಾಧ್ಯವಾಗಲಿಲ್ಲ” ಎಂದು ಪಲಾಶ್ಬರಿ ಕ್ಷೇತ್ರದ ಸ್ಥಳೀಯ ಶಾಸಕ ಹೇಮಂಗಾ ಠಾಕುರಿಯಾ ಹೇಳಿದ್ದಾರೆ.

Join Whatsapp