ಮೊಸಳೆಯನ್ನೇ ಮದುವೆಯಾದ ಮೇಯರ್ !

Prasthutha|

ಓಕ್ಸಾಕಾ:  ಮೇಯರ್ ರೊಬ್ಬರು ಮೊಸಳೆಯನ್ನೇ ವಿವಾಹವಾದ ಘಟನೆ ಮೆಕ್ಸಿಕೋದ ಓಕ್ಸಾಕಾ ಎಂಬ ಸಣ್ಣ ಮೀನುಗಾರಿಕಾ ಹಳ್ಳಿಯಲ್ಲಿ ನಡೆದಿದೆ.

- Advertisement -

ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಎಂಬಾತನೇ ಮೊಸಳೆಯನ್ನು ವಿವಾಹ ಮಾಡಿಕೊಂಡವರು ಎಂದು ತಿಳಿದುಬಂದಿದೆ.

ಆತ ಮೊಸಳೆಯನ್ನು ವಧುವಿನಂತೆ ಸಿಂಗರಿಸಿ ವಿವಾಹವಾಗಿದ್ದಾನೆ. ಅಲ್ಲದೆ ನವ ವಧು ಮೊಸಳೆಗೆ ಮುತ್ತನ್ನು ನೀಡಿದ್ದಾನೆ. ಆದರೆ ಈ ಸಮಯದಲ್ಲಿ ಮೊಸಳೆಯ ಬಾಯಿಯನ್ನು ಹಗ್ಗದಲ್ಲಿ ಕಟ್ಟಿಹಾಕಲಾಗಿತ್ತು.

- Advertisement -

ಓಕ್ಸಾಕಾ ಮೇಯರ್ ವಧುವಿನಂತೆ ಧರಿಸಿರುವ ಮೊಸಳೆಯನ್ನು ವಿವಾಹವಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಕ್ಸಾಕಾ ರಾಜ್ಯದ ಚೊಂಟಾಲ್ ಮತ್ತು ಹುವಾವ್ ಸ್ಥಳೀಯ ಸಮುದಾಯಗಳಲ್ಲಿ ಈ ಸಂಪ್ರದಾಯವು ಶತಮಾನಗಳ ಹಿಂದಿನ ಹಿಸ್ಪಾನಿಕ್ ಕಾಲದ್ದು ಎನ್ನಲಾಗಿದೆ. ಪ್ರಕೃತಿಯ ಅನುಗ್ರಹಕ್ಕಾಗಿ ಪ್ರಾರ್ಥನೆಯ ರೂಪದಲ್ಲಿ ಇದನ್ನು ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

Join Whatsapp