You Tube ಕ್ರಿಯೇಟರ್’ಗಳಿಂದ ಭಾರತದ ಜಿಡಿಪಿಗೆ ಸುಮಾರು 10,000 ಕೋಟಿ ಕೊಡುಗೆ!

Prasthutha|

ನವದೆಹಲಿ: ಯುಟ್ಯೂಬ್ ವೀಡಿಯೊ ಕ್ರಿಯೇಟರ್’ಗಳು ಭಾರತದ ಜಿಡಿಪಿಗೆ ಸುಮಾರು 10,000 ಕೋಟಿ ರೂ. ಕೊಡುಗೆ ನೀಡಿದ್ದಾರೆ ಎಂದು ಯುಟ್ಯೂಬ್ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

- Advertisement -

ಅಲ್ಲದೆ ಯುಟ್ಯೂಬ್ ಭಾರತದಲ್ಲಿ 7.50 ಲಕ್ಷ ಉದ್ಯೋಗಗಳಿಗೆ ಸಮಾನವಾದ ಉದ್ಯೋಗವಕಾಶಗಳನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.

2023ರ ಯುಟ್ಯೂಬ್ ಹೊಸ ಅವತರಣಿಕೆಯಲ್ಲಿ ಕಂಟೆಂಟ್ ಕ್ರಿಯೇಟರ್’ಗಳಿಗೆ ವಿಡಿಯೊಗಳಿಂದ ಹೆಚ್ಚಿನ ಹಣ ಸಂಪಾದಿಸಲು ಹೊಸ ಅವಕಾಶಗಳನ್ನು ನೀಡಲಾಗುತ್ತದೆ. ಭಾರತದಲ್ಲಿನ ಯುಟ್ಯೂಬ್ ಕಂಟೆಂಟ್ ಹೊರದೇಶಗಳಲ್ಲಿ ಕೂಡ ಹೆಚ್ಚು ವೀಕ್ಷಣೆಯಾಗುತ್ತಿದೆ ಎಂದಿದ್ದಾರೆ.

- Advertisement -

ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್’ಗಳು ಭಾರತದ ಆರ್ಥಿಕ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತಿದ್ದು, ಇದರಿಂದ ಉದ್ಯೋಗವಕಾಶಗಳು ಹೆಚ್ಚಾಗುತ್ತಿವೆ. ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಯುಟ್ಯೂಬ್ ಮಾರುಕಟ್ಟೆ ವಿಭಾಗದ ಅಜಯ್ ವಿದ್ಯಾಸಾಗರ್ ಹೇಳಿದ್ದಾರೆ.

ಹಿಂದಿ, ಮರಾಠಿ, ತಮಿಳು, ತೆಲುಗು, ಕನ್ನಡ, ಗುಜರಾತಿ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 100ಕ್ಕೂ ಹೆಚ್ಚು ವೈದ್ಯಕೀಯಕ್ಕೆ ಸಂಬಂಧಿಸಿದಂತಹ ವಿಶ್ವಾಸಾರ್ಹ ವಿಷಯವನ್ನು ರಚಿಸಲು ನಾರಾಯಣ, ಮಣಿಪಾಲ್, ಮೇದಾಂತ ಮತ್ತು ಶಾಲ್ಬಿ ಸೇರಿದಂತೆ ಹೆಚ್ಚಿನ ಆರೋಗ್ಯ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಪ್ರಯತ್ನಗಳನ್ನು ವಿಸ್ತರಿಸುವುದಾಗಿ ಅವರು ಹೇಳಿದರು.



Join Whatsapp