ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ಕಂಡರೆ ನಿಮಗೆ ಹಣ ಗಳಿಸಬಹುದು !

Prasthutha|

ನವದೆಹಲಿ: ವಾಹನ ಸವಾರರು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದರೆ, ಅಂತಹದ್ದನ್ನು ಜನರು ಫೋಟೋ ತೆಗೆದು ಅದನ್ನು ಟ್ರಾಫಿಕ್ ಪೊಲೀಸ್ ಇಲಾಖೆಗೆ ಕಳುಹಿಸಿದವರಿಗೆ 500 ರೂ. ನೀಡಲಾಗುತ್ತದೆ.
ಹೌದು ಇಂತಹ ಹೊಸ ನಿಯಮವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಯಾರಾದರೂ ವಾಹನ ಸವಾರರು ನೋ ಪಾರ್ಕಿಂಗ್ ಅಥವಾ ಜನನಿಬಿಡ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದರೆ, ಅಂತಹದ್ದನ್ನು ಜನರು ಫೋಟೋ ತೆಗೆದು ಅದನ್ನು ಟ್ರಾಫಿಕ್ ಪೊಲೀಸ್ ಇಲಾಖೆಗೆ ಕಳುಹಿಸಬೇಕು. ಆಗ ಆ ವಾಹನ ಮಾಲೀಕರಿಗೆ 1 ಸಾವಿರ ರೂ ದಂಡ ಬೀಳಲಿದೆ. ಅದನ್ನು ಕಳುಹಿಸಿದವರಿಗೆ 500 ರೂಪಾಯಿ ಬಹುಮಾನವೂ ನೀಡುವ ಚಿಂತನೆ ಇದೆ. ಈ ಸಂಬಂಧದ ಕಾನೂನುನ್ನು ಶೀಘ್ರ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Join Whatsapp