ಉತ್ತರ ಪ್ರದೇಶ: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ದೇವಸ್ಥಾನವೊಂದರಲ್ಲಿ ಸರ್ಕಾರ ಸಂಪುಟ ಸಭೆ ನಡೆಸಲು ತೀರ್ಮಾನಿಸಿದೆ. ಡಿ.16ರಂದು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಯೋಗಿ ಸರ್ಕಾರದ ಸಚಿವ ಸಂಪುಟ ಸಭೆಯು ನಡೆಯಲಿದೆ. ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು ಡಾ.ದಿನೇಶ್ ಶರ್ಮಾ ಸೇರಿದಂತೆ ಇತರೆ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ನಾನಾ ಕಸರತ್ತು ನಡೆಸುತ್ತಿದ್ದಂತೆ, ಹಿಂದೂ ಮತಗಳನ್ನು ಮತ್ತಷ್ಟು ಭದ್ರಪಡಿಸುವ ನಿಟ್ಟಿನಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಲು ತೀರ್ಮಾನಿಸಿದೆ. ಚುನಾವಣೆಗೂ ಮುನ್ನ ಕಾಶಿ ವಿಶ್ವನಾಥ ಧಾಮದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಪೂರ್ವಾಂಚಲ್‌ಗೆ ಸಹಾಯ ಮಾಡಲು ಯೋಗಿ ಸರ್ಕಾರ ದೊಡ್ಡ ಸಂದೇಶ ನೀಡಲು ಬಯಸಿದೆ.
ಡಿಸೆಂಬರ್ 16 ರಂದು ಯುಪಿ ಸರ್ಕಾರದ ಕ್ಯಾಬಿನೆಟ್ ಸಭೆ ನಡೆಯಲಿದ್ದು. ಬಾಬಾ ವಿಶ್ವನಾಥ್ ಅವರ ಪೂಜೆಯ ನಂತರ ಧಾಮ್ ಆವರಣದಲ್ಲಿ ಈ ಸಂಪುಟ ಸಭೆ ನಡೆಯಲಿದೆ. ಸಭೆಯ ಸಿದ್ಧತೆಯನ್ನು ವಾರಣಾಸಿ ಜಿಲ್ಲಾಡಳಿತ ಹೊತ್ತುಕೊಂಡಿದೆ.