ಸಜಿಪ ನಡುವಿನಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

Prasthutha|

ಬಂಟ್ವಾಳ : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಪೋರಮ್ ಸಜೀಪ ನಡು ಹಾಗೂ ಯೇನಪೋಯ ಮೆಡಿಕಲ್ ಕಾಲೇಜ್ ಸಹಭಾಗಿತ್ವದಲ್ಲಿ ಸಜೀಪ ಉಸ್ತಾದ್ ಸ್ಮರಣಾರ್ಥ ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸಜಿಪ ನಡುವಿನಲ್ಲಿ ಏರ್ಪಡಿಸಲಾಗಿತ್ತು.

- Advertisement -


ಸಜೀಪ ನಡು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂನ ಅಧ್ಯಕ್ಷ ನೌಶಾದ್ ಸಜೀಪ ಅಧ್ಯಕ್ಷತೆ ವಹಿಸಿದ್ದರು. ಸಜಿಪ ನಡು ಎಸ್.ವೈ.ಎಸ್. ಅಧ್ಯಕ್ಷ ಅಬ್ಬಾಸ್ ಮುಸ್ಲಿಯಾರ್ ದುಅ ನೆರವೇರಿಸಿದರು. ಸಜೀಪ ನಡು ಪಾಪ್ಯುಲರ್ ಪ್ರಂಟ್ ಬ್ಲಡ್ ಡೋನರ್ಸ್ ಗೌರವಾಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ರಾಜ್ಯ ಸಂಚಾಲಕ ಹರಾಝ್ ಕಲ್ಲಡ್ಕ, ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ಮೆಲ್ಕಾರ್ ವಲಯ ಅಧ್ಯಕ್ಷ ರಹಿಮಾನ್ ಮಠ, ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಸಜೀಪ ಹಾಜಿ ಅಬ್ದುಲ್ ರಝಾಕ್, ಎಸ್.ಡಿ.ಪಿ.ಐ. ದ.ಕ.ಜಿಲ್ಲೆ ಜಿಲ್ಲಾ ಸಮಿತಿ ಸದಸ್ಯ ನಾಸೀರ್, ಸಜಿಪ ನಡು ಪಂಚಾಯತ್ ಅಧ್ಯಕ್ಷೆ ಸಜೀಪ ಪೌಝಿಯಾ ಬಾನು, ಸಜೀಪ ನಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಎನ್.ಇಕ್ಬಾಲ್ , ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಸಜೀಪ ನಡು ಉಪಾಧ್ಯಕ್ಷ ಅಬ್ದುಲ್ ಗಪೂರ್ ಭಾಗವಹಿಸಿದರು.

- Advertisement -


ಇದೇ ವೇಳೆ ಜನಾಬ್ ಅಹ್ಮದ್ ಬಾವ ಮತ್ತು ಯೂಸುಫ್ ಸಜೀಪ ಅವರನ್ನು ಸನ್ಮಾನಿಸಲಾಯಿತು. ತಾಹಿದ್ ಸಜೀಪ ಸ್ವಾಗತಿಸಿ ಧನ್ಯವಾದ ನೆರವೇರಿಸಿದರು. ಒಟ್ಟು ರಕ್ತದಾನಿಗಳಿಂದ 108 ಯುನಿಟ್ ರಕ್ತ ಸಂಗ್ರಹವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Join Whatsapp