ಉತ್ತರ ಪ್ರದೇಶದಲ್ಲಿ 80 – 20ರ ನಡುವಿನ ಯುದ್ಧ ಎಂದ ಯೋಗಿ ಆದಿತ್ಯನಾಥ್

Prasthutha|

- Advertisement -

ಲಕ್ನೋ: ದೇಶದ ರಾಜಕೀಯ ಚಿತ್ರಣವನ್ನು ಬದಲಿಸಬಲ್ಲ ಶಕ್ತಿ ಇರುವ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಬಾಕಿ ಇದ್ದು, ಈ ಚುನಾವಣೆಯನ್ನು 80 ಮತ್ತು 20ರ ನಡುವಿನ ಯುದ್ಧ ಎಂದು ಉತ್ತರಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಈ ಹೇಳಿಕೆಯು ಧರ್ಮ ವಿಭಜನೆಯನ್ನು ಸೂಚಿಸುತ್ತದೆ. ಮುಂದಿನ ತಿಂಗಳು ಚುನಾವಣೆ ನಡೆಯಲಿರುವುದರಿಂದ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಜನಸಂಖ್ಯೆಯ ಅನುಪಾತವನ್ನು ಪ್ರಸ್ತಾಪಿಸಿದ್ದಾರೆ. ಹಿಂದೂಗಳು ಶೇಕಡಾ 80ರಷ್ಟಿದ್ದು, ಮುಸ್ಲಿಮರು 20ರಷ್ಟಿದ್ದಾರೆ. ಇದನ್ನೇ ಅವರು 80-20 ಎಂದು ಹೇಳಿದ್ದಾರೆ.

- Advertisement -

ಸುದ್ದಿಗಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ“ಸ್ಪರ್ಧೆಯು ಈಗ ತುಂಬಾ ಮುಂದೆ ಸಾಗಿದೆ. ಈಗ ಹೋರಾಟ 80 ಮತ್ತು 20ರ ನಡುವಿನದ್ದು” ಎಂದು ಮುಖ್ಯಮಂತ್ರಿ ಹೇಳಿದರು.



Join Whatsapp