ಕೇರಳದ ವಿರುದ್ಧ ಮತ್ತೆ ನಾಲಗೆ ಹರಿಯ ಬಿಟ್ಟ ಯೋಗಿ ಆದಿತ್ಯನಾಥ್

Prasthutha|

ಲಕ್ನೋ : ಉತ್ತರ ಪ್ರದೇಶವನ್ನುಕೇರಳ ಮಾಡಬಾರದು ಎಂಬ ವಿವಾದಾತ್ಮಕ ಹೇಳಿಕೆಯೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುನಃ ಪ್ರತ್ಯಕ್ಷವಾಗಿದ್ದಾರೆ. ಯುಪಿ ಯನ್ನು ಕೇರಳ, ಬಂಗಾಳ ಮತ್ತು ಕಾಶ್ಮೀರದಂತೆ ಮಾಡಬಾರದು. ಯುಪಿ ಕೇರಳವಾಗುವ ದಿನ  ವಿಳಂಬವಿಲ್ಲ ಎಂದೂ ಅವರು ಹೇಳಿದರು.

- Advertisement -

ಈ ಹಿಂದೆಯೂ ಯೋಗಿ  ಕೇರಳವನ್ನು ಟೀಕಿಸಿದ್ದು ,ಇದರ ವಿರುದ್ಧ ಹಲವು ಪ್ರತಿಭಟನೆಗಳು ನಡೆದಿತ್ತು. ಮೊದಲ ಹಂತದ ಚುನಾವಣೆಯ ವೇಳೆಯಲ್ಲಿ  ಯೋಗಿ ತಮ್ಮ ಮೊದಲ ವಿವಾದಾತ್ಮಕ ಹೇಳಿಕೆ  ನೀಡಿದ್ದರು. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಅನೇಕ  ಅಭಿವೃದ್ಧಿಗಳು ನಡೆದಿವೆ. ಆದರೆ ನೀವು ನಿಮ್ಮ ಮತಗಳನ್ನು  ದುರುಪಯೋಗಪಡಿಸಿದರೆ  ಈ ಐದು ವರ್ಷಗಳ ಶ್ರಮವು ಫಲಶೂನ್ಯವಾಗುತ್ತದೆ. ಉತ್ತರ ಪ್ರದೇಶ ಕಾಶ್ಮೀರ, ಕೇರಳ ಮತ್ತು ಬಂಗಾಳವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಯೋಗಿ ಟ್ವಿಟರ್ ವೀಡಿಯೊದಲ್ಲಿ ಹೇಳಿದ್ದಾರೆ. ನಿಮ್ಮ ಮತಗಳನ್ನು ನನ್ನ ಐದು ವರ್ಷಗಳ ಪ್ರಯತ್ನಕ್ಕೆ ಸಂದ ಜಯ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಮತವು ನಿಮ್ಮ ನಿರ್ಭೀತ ಜೀವನದ ಖಾತರಿಯಾಗಿದೆ ಎಂದು ಯೋಗಿ ಹೇಳಿದರು.

ಕೇರಳವಾಗದಂತೆ ಎಚ್ಚರಿಕೆಯಿಂದಮತ ಚಲಾಯಿಸುವಂತೆ ಯೋಗಿ ಆದಿತ್ಯನಾಥ್ ಅಲ್ಲಿನ ಜನರಿಗೆ ನೀಡಿದ ಸೂಚನೆ ಆಶ್ಚರ್ಯಕರವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದರು.

- Advertisement -

ಕೇರಳದಂತಾಗಲು  ಮತ ಚಲಾಯಿಸುವಂತೆ ವಿರೋಧ ಪಕ್ಷದ ನಾಯಕ  ವಿ.ಡಿ ಸತೀಶ್ ಉತ್ತರ ಪ್ರದೇಶದ ಜನರಲ್ಲಿ ಕೇಳಿಕೊಂಡಿದ್ದರು.

Join Whatsapp