ಕೆನಡಾದಲ್ಲಿ ಮುಂದುವರಿದ ಪ್ರತಿಭಟನೆ: ಜನಜೀವನ ಅಸ್ತವ್ಯಸ್ತ

Prasthutha|

ಒಟ್ಟಾವ: ಕೆನಡಾದ ಒಟ್ಟಾವಾದಲ್ಲಿ ಜನರು ಒಟ್ಟಾಗಿ ಪ್ರತಿಭಟಿಸುವುದರ ವಿರುದ್ಧ ಸರಕಾರವು ಒಂದು ಲಕ್ಷದ ವರೆಗೆ ದಂಡ ಹಾಕುವ ಎಚ್ಚರಿಕೆ ನೀಡಿದ್ದರೂ ಜನರ ಪ್ರತಿಭಟನೆ ನಿಂತಿಲ್ಲ. ಬ್ಯಾಂಡ್ ಬಾರಿಸುವುದು, ಗದ್ದಲಕ್ಕೆ ಕೊನೆ ಹಾಡಲಾಗಿದೆಯಾದರೂ ಜನರು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ.
ಕೋವಿಡ್ 19 ಹೆಸರಿನಲ್ಲಿ ಲಸಿಕೆ ಮಾಫಿಯಾ ಮತ್ತು ಮೆಡಿಕಲ್ ಮಾಫಿಯಾ ನಡೆದಿದೆ, ಕೊರೋನಾ ಹೆಸರಿನಲ್ಲಿ ಹೇರಿರುವ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಬೇಕು ಎಂದು ಪ್ರತಿಭಟನಕಾರರು ಬೀದಿಗಿಳಿದಿದ್ದಾರೆ.
ಜನವರಿ 28ರಂದು ಲಾರಿಗಳಲ್ಲಿ ಜನರು ಬಂದು ಬೀದಿಯಲ್ಲಿ ಹೇಗೆಂದರೆ ಹಾಗೆ ಸುತ್ತುವುದರೊಂದಿಗೆ ಈ ಪ್ರತಿಭಟನೆ ಆರಂಭವಾಯಿತು. ಹಾಡು, ಕುಣಿತ, ಹೆಚ್ಚಾದುದರಿಂದ ಸರಕಾರ ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದೆ. ಆದರೂ ಪ್ರತಿಭಟನೆ ನಿಂತಿಲ್ಲ.
ಮುಖ್ಯವಾಗಿ ಕೊರೋನಾ ನಿರ್ಬಂಧಗಳನ್ನು ಮುರಿದು ಪ್ರತಿಭಟನೆಯು ಶಾಂತಿಯುತವಾಗಿ ನಡೆದಿರುವುದರಿಂದ ಸರಕಾರವು ಪರಿಸ್ಥಿತಿಯ ಅವಲೋಕನ ಮಾಡುವುದರ ಹೊರತು ಬೇರೇನೂ ಮಾಡಲು ಸಾಧ್ಯವಾಗುತ್ತಿಲ್ಲ.

Join Whatsapp