ಯೋಗ ಹುಟ್ಟಿದ್ದು ನೇಪಾಳದಲ್ಲಿ ಹೊರತು ಭಾರತದಲ್ಲಲ್ಲ | ನೆಪಾಳ ಪ್ರಧಾನಿ

Prasthutha|

ಕಠ್ಮಂಡು : ಯೋಗವು ಮೂಲತಃ ಹುಟ್ಟಿಕೊಂಡ್ಡಿದ್ದು ನೇಪಾಳದಲ್ಲಿ ಹೊರತು ಭಾರತದಲ್ಲಲ್ಲ ಎಂದು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಹೇಳಿದ್ದಾರೆ.

- Advertisement -

ಈ ಕುರಿತು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಭಾಷಣ ಮಾಡಿದ ಅವರು, “ಯೋಗವು ನೇಪಾಳದಲ್ಲಿ ಹುಟ್ಟಿಕೊಂಡಿತು, ಭಾರತದಲ್ಲಿ ಅಲ್ಲ. ಯೋಗ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ, ಭಾರತದ ಸ್ವರೂಪ ಈಗಿನಂತಿರಲಿಲ್ಲ ಬದಲಾಗಿ ವಿವಿಧ ವಿಭಾಗಗಳಲ್ಲಿ ವಿಂಗಡನೆಯಾಗಿತ್ತು” ಎಂದರು.

ಈ ಕುರಿತು ಭಾರತೀಯ ತಜ್ಞರು ಸತ್ಯವನ್ನು ಮರೆಮಾಚಿ ಸುಳ್ಳನ್ನು ಹರಡುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಕಳೆದ ಜುಲೈನಲ್ಲಿ ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆ ನೇಪಾಳದಲ್ಲಿದೆ ಮತ್ತು ಭಗವಾನ್ ರಾಮ ನೇಪಾಳಿ ಎಂದು ಒಲಿ ಹೇಳಿಕೊಂಡಿದ್ದರು.

Join Whatsapp